ಲೀಲಾ ಮಣ್ಣಾಲ ಅವರ ಮಕ್ಕಳ ಸಚಿತ್ರ ಕತೆಗಳ ಸಂಕಲನ ‘ಅಮ್ಮ ತೋರಿದ ಅಪೂರ್ವ ಲೋಕ’. ಈ ಕೃತಿಯಲ್ಲಿ ಮಕ್ಕಳ ಮನಗೆಲ್ಲುವ ಅನೇಕ ಕತೆಗಳನ್ನು ಚಿತ್ರ ಸಮೇವಾಗಿ ನೀಡುವ ಮೂಲಕ ಮಕ್ಕಳ ಚಿಂತನಾ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ಲೇಖಕಿ ಮಾಡಿದ್ದಾರೆ.
ಲೇಖಕಿ ಲೀಲಾ ಮಣ್ಣಾಲ ಅವರು 1953 ಜೂನ್ 20 ಪುತ್ತೂರಿನ ಮಣ್ಣಾಲದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರೆ. ಅಮ್ಮ ಪ್ರೌಢಾಶಾಲಾ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ್ದಾರೆ. ತಂದೆ ಗಿಳಿಯಾಲ ಈಶ್ವರಭಟ್, ತಾಯಿ ಪಾರ್ವತಿ. ‘ಹೊಣೆ ಮತ್ತು ಇತರ ಕಥೆಗಳು, ತೆರೆ, ಮುಸ್ಸಂಜೆ ಹಕ್ಕಿಗಳು, ಮತ್ತೆ ಬಂದಿದೆ ಯುಗಾದಿ’ ಅವರ ಪ್ರಕಟಿತ ಕೃತಿಗಳು. ‘ವಿಭಿನ್ನರು ಮತ್ತು ಅನಾವರಣ, ನಿಮ್ಮ ನಿನಾದ, ಕೆಂಪು ಚಿನ್ನ’ - ಕಾವ್ಯ, ‘ಮಧು ಮಂಟಪ’ - ನಾಟಕ, ‘ನವರಸಾಭಿನಯ, ರಸವರ್ಷ, ಭಾವರಸಧಾರೆ’ - ಕಾದಂಬರಿ, ‘ಪಿಂಕಿಯ ಪ್ರಪಂಚ, ಬಾ ಕಂದ ಹಾಡೋಣ, ಪುಣ್ಯಕೋಟಿ, ಜೀಮೂತ ವಾಹನ, ಅಪೂರ್ವ ಲೋಕ’ - ಬಾಲಸಾಹಿತ್ಯ. ‘ನಿರಂತರ ಸತ್ಯ, ...
READ MORE