ಲೇಖಕರಾದ ಆನಂದ ಪಾಟೀಲರು ಬರೆದ ಕೃತಿ ’ಎದ್ದು ನಿಂತ ಬಾಲ’ ಮಕ್ಕಳಿಗಾಗಿಯೇ ಬರೆದಿರುವ ಈ ಕೃತಿ ಹಲವು ಕತೆಗಳನ್ನು ಒಳಗೊಂಡಿದೆ.
ಎದ್ದುನಿಂತ ಬಾಲ !, ಖಾಲಿ ಕಡ್ಡಿಪೆಟ್ಟಿಗೆ, ಬೆಳಕಿಂಡಿ, ನಾಯಿ ಓಡಿ ಬಂದದ್ದು ಯಾಕೆ?, ಹಸಿರು ಬೆಕ್ಕು,ಬಾಲವಿಲ್ಲದ ಒಂಟಿ ಕಿವಿಯ ನಾಯಿ, ಅಂತೂ ಕಂಡ ಆಕಾಶ, ಗೂಢ…,ಪುಟಾಣಿ, ಕಾಗದಗಳು ಬರುತ್ತಿವೆ, ಪಿಟ್ಟೂನ ಡೈರಿ, ಗುಬ್ಬೀ ಕತೆಗಳು, ಮಲ್ಲೂನ ಸ್ವಾತಂತ್ಯ್ಸೋತ್ಸವ, ಸಿಕ್ಕಲಿಲ್ಲ ರಾಜಿ, ಗುಮಾನಿಯಲ್ಲಿ ಕೆಡವಿದ್ದು!, ಖಯಾಲಿಯ ಹುಡುಗ, ಒಂದಲ್ಲ ಎರಡಲ್ಲ ಮೂರು, ಸೊಳ್ಳೆ ಗೆಳೆಯರು, ಹುಟ್ಟಿದ ಹಬ್ಬ, ಜೋಡಿ ಜೀವ, ಪುಟ್ಟಕ್ಕನ ಪತ್ರಗಳು ಮುಂತಾದ ಕತೆಗಳನ್ನು ಒಳಗೊಂಡಿದೆ.
ಇವರ ಮೇಲಿನ ಕತೆಗಳಲ್ಲಿ ಹಲವಾರು ಪ್ರಾಣಿಗಳು, ಪಕ್ಷಿಗಳು, ಮಕ್ಕಳ ನಾನಾ ಬಗೆಯ ಮನಸ್ಸಿನ ಒಳ ಸಂತಸಗಳು, ಸಿಟ್ಟು ಸೆಡವು, ಕೇಕೆ ಎಲ್ಲವನ್ನೂ ಕಾಣಬಹುದಾಗಿದೆ.
ಆನಂದ ವಿ. ಪಾಟೀಲ ಅವರು ಜನವರಿ 1-1955, ಧಾರವಾಡ ಜಿಲ್ಲೆಯ ನಾಗಲಿಂಗನ ನವಲಗುಂದದಲ್ಲಿ ಜನಿಸಿದರು. ವಿದ್ಯಾಭ್ಯಾಸ- ಘಟಪ್ರಭಾ, ನವಲಗುಂದ, ಗೋಕಾಕ, ಹಿಡಕಲ್ ಮತ್ತು ಧಾರವಾಡಗಳಲ್ಲಿ ಮುಗಿಸಿದ ಅವರು, ಜಾನಪದ ಕಲೆ ಮತ್ತು ವಿಧಿ ಕ್ರಿಯೆಗಳು' ಕುರಿತ ಪ್ರೌಢ ಪ್ರಬಂಧಕ್ಕೆ ಧಾರವಾಡ ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸದ್ಯ ಆಕಾಶವಾಣಿಯಲ್ಲಿ ಉಪ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. “ಅಜ್ಜಿ ಮನೆ ಬಹಳ ದೂರ', 'ಹೂ', 'ಹಕ್ಕಿ ಪುಟಾಣಿ', 'ಹೂ ಅಂದ್ರ ಹೂ', “ಅಜ್ಜಿ ಬಿಡಿಕಾಳ್ ಬಿಡಿಕಾಳು', 'ಪಪ್ಪಿ ಕೊಟ್ಟು ಬಾಪೂ', 'ಹೃದ್ಧಿ', 'ಪುಟ್ಟ ಪುಟ್ಟ ಪಾಪು ಪುಟಾಣಿ ಪಾಪು', 'ಪುಟ್ಟನ ...
READ MORE