`ಕಥೆಗಳ ತೋರಣ ಭಾಗ-1’ ಕೃತಿಯು ಶಾಲಿನಿ ಮೂರ್ತಿ ಅವರ ಮಕ್ಕಳ ಸಾಹಿತ್ಯ ಕುರಿತ ಕಥಾಗುಚ್ಛವಾಗಿದೆ. ಈ ಕೃತಿಗೆ ಹಿನ್ನುಡಿ ಬರೆದಿರುವ ಸತೀಶ್ ಚಪ್ಪರಿಕೆ ಅವರು, ಎಳೆಯ ಮಕ್ಕಳು ಮತ್ತು ಅವರ ಅಭಿವೃದ್ದಿಯ ಬಗ್ಗೆ ಅಪಾರ ಕಾಳಜಿಯಿರುವ ಶಾಲಿನಿ ಮೂರ್ತಿ ಅವರು, ಈಗಾಗಲೇ ‘ಅಜಾತಶತ್ರು’ ಎಂಬ ಕೃತಿಯನ್ನು ರಚಿಸಿದ್ದಾರೆ. ಅದು ಅವರ ಸಹೋದರ, ದಿವಂಗತ ಯು. ಚಿತ್ತರಂಜನ್ ಕುರಿತಾದ ಕೃತಿಯಾಗಿದೆ. ಕಥೆಗಳ ತೋರಣ ಅವರ ಎರಡನೇಯ ಕೃತಿಯಾಗಿದ್ದು, ಕನ್ನಡದಲ್ಲಿ ಮಕ್ಕಳ ಸಾಹಿತ್ಯದಲ್ಲಿನ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಇದು ಒಂದು ಮಹತ್ವದ ಕೃತಿ. ಅದಲ್ಲದೇ, ಒಬ್ಬ ಮಹಾತಾಯಿಯ ಅಂತಃಕರಣದ ಪ್ರತಿರೂಪದಂತಿರುವ ಲೇಖಕಿ ಅವರ ಮುಂದಿನ ಸೃಜನಶೀಲ ಬದುಕನ್ನು ಮಕ್ಕಳ ಸಾಹಿತ್ಯಕ್ಕಾಗಿಯೇ ಮೀಸಲಿಡಲು ನಿರ್ಧರಿಸಿ, ಇಟ್ಟ ಮೊದಲ ಪರಿಣಾಮಕಾರಿ ಹೆಜ್ಜೆಯೇ ಈ ಕೃತಿ. ಮುಂದಿನ ದಿನಗಳಲ್ಲಿ ಶಾಲಿನಿ ಮೂರ್ತಿ ಅವರಿಂದ ಇಂತಹುದೇ ಅನೇಕ ಮಕ್ಕಳ ಸಾಹಿತ್ಯ ಗುಚ್ಛಗಳು ಒಡಮೂಡಲಿ. ಆ ಮೂಲಕ ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಲಿ' ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ಶಾಲಿನಿ ಮೂರ್ತಿ ಅವರು ಮೂಲತಃ ಉಡುಪಿಯವರು. ತಂದೆ ಉಪ್ಪೂರು ಶ್ರೀನಿವಾಸ ಭಟ್ಟ, ತಾಯಿ ವಸಂತಿ. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಬಿ.ಎ. ಪೂರ್ಣಗೊಳಿಸಿದರು. ಪತಿ ಅಶೋಕ ಮೂರ್ತಿ ಅವರ ‘ಎರ್ಕಾಡಿ ಸಿಸ್ಟಮ್ಸ್ ’ ನಲ್ಲಿ ಪಾಲುದಾರರು. ಮೂಲ ಟೆಕ್ನಾಲೆಜಿಯ ಡೈರೆಕ್ಟರ್ ಕೂಡಾ ಆಗಿದ್ದರು. ಬೆಂಗಳೂರಿನ ಎಲ್.ಸಿ.ಯ ಟ್ರಸ್ಟ್,ನ ಧರ್ಮದರ್ಶಿಗಳು. ಇದರ ಅಡಿ ಸುಮಾರು 13 ಸರಕಾರಿ ಶಾಲೆಗಳ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು, ಬೆಳೆಸಿದ್ದಾರೆ. ಕೃತಿಗಳು: ಅಜಾತ ಶತ್ರು (ಡಾ. ಯು. ಚಿತ್ತರಂಜನ್ ಕುರಿತು) ...
READ MORE