ಪಂಚತಂತ್ರ ಮತ್ತು ಈಸೋಪನ ಕತೆಗಳಲ್ಲಿರುವಂತೆ ಪ್ರಾಣಿಗಳೇ ಮಾತಾಡುವ ಪಾತ್ರಗಳಾದರೂ, ಪ್ರಸ್ತುತ ಕಾಲಘಟ್ಟಕ್ಕೆ ಬೇಕಾದದಂತಹ ಜಾಣ್ಮೆ, ನೀತಿ ಮತ್ತು ಕೌಶಲ್ಯಗಳನ್ನು ಪ್ರತಿಫಲಿಸುವಂತಹ ಮಕ್ಕಳ ಕತೆಗಳು ಆಡು ಭಾಷೆಯಲ್ಲಿ ನಿರೂಪಿತವಾಗಿವೆ. ಓದಿ ಹೇಳುವಂತಹ ಕೃತಿಗಳ ಸಾಲಿಗೆ ಸೇರಿರುವ ಈ ಸಂಕಲನದಲ್ಲಿ ವಿಡಂಬನೆ ಮತ್ತು ಜಾಣ್ಮೆಯೆರಡೂ ಮಿಳಿತವಾಗಿದೆ.
ಯೋಗೇಶ್ ಮಾಸ್ಟರ್ ಅವರ ಪ್ರಯೋಗಶೀಲತೆ ಮಕ್ಕಳ ಪುಸ್ತಕದಲ್ಲಿಯೂ ಮುಂದುವರಿದಿದೆ.
ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಾವ್ಯ, ಕತೆ, ಕಾದಂಬರಿ, ಪ್ರಬಂಧಗಳು, ಸಂಶೋಧನಾ ಲೇಖನಗಳು, ನಾಟಕ, ಮಕ್ಕಳ ಸಾಹಿತ್ಯ, ಮನೋವೈಜ್ಞಾನಿಕ ಮತ್ತು ವೈಚಾರಿಕ ಲೇಖನಗಳು, ಗೀತನಾಟಕ, ಚಿತ್ರಕತೆ, ಸಂಭಾಷಣೆ ಮತ್ತು ಗೀತ ಸಾಹಿತ್ಯಗಳ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಹೆಸರಿಸಲು ಕೆಲವು, ಮರಳಿ ಮನೆಗೆ, ಜೀವನ ಸಂಜೀವನ, ಕೊನೆಯ ಅಂಕ, ಮಳೆ ಬಂದು ನಿಂತಾಗ, ಅಮೃತ, ಸಮಾನಾಂತರ ರೇಖೆಗಳು, ರಾಧೇ ಶ್ಯಾಮನ ಪ್ರೇಮ ...
READ MOREಕತೆ ಕೇಳು ಕಂದ ಸರಣಿಯಲ್ಲಿ ‘ನಾನ್ ಕೋಳಿಕೆ ರಂಗ’ ಕತೆಯನ್ನು ದೇವಿ ಯೋಗಂ ಅವರ ಭಾವಪೂರ್ಣ ವಾಚನ