‘ಅಮೂಲ್ಯ ರತ್ನ’ ವಿ.ಗಣೇಶ್ ಅವರ ಕತಾಸಂಕಲನವಾಗಿದೆ. ಅಕಸ್ಮಾತ್ ತಮ್ಮ ದೈನಂದಿನ ವ್ಯಾಸಂಗದಲ್ಲಿ ತೊಡಗಿದ್ದರೂ ಅದು ಟಿ.ವಿ. ರೇಡಿಯೋ ಟೇಪ್ ರೆಕಾರ್ಡ್ ಗಳ ಮಧ್ಯದಲ್ಲಿಯೇ ನಡೆಯುತ್ತಿರುತ್ತದೆ. ಬಾಲ್ಯದಿಂದಲೂ ಓದುವ ಹವ್ಯಾಸನನ್ನು ಬೆಳಸಿಕೊಂಡಿರುವ ಮಕ್ಕಳು ಸಮಾಜದಲ್ಲಿ ದೊಡ್ಡ ಆಸ್ತಿಯಾಗುವುದ ರಲ್ಲಿ ಸಂಶಯವಿಲ್ಲ. ಅದಕ್ಕನುಗುಣವಾಗಿ ಮಕ್ಕಳ ಸಾಹಿತ್ಯದ ಬೆಳವಣಿಗೆಯೂ ಕೂಡಾ ಪ್ರಾಮುಖ್ಯವಾದುದು. ವಿ. ಗಣೇಶ್‌ರವರು ನನ್ನ ವಿದ್ಯಾರ್ಥಿ ಹಾಗೂ ಸಹೋದ್ಯೋಗಿ. ಇವರು ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬೋಧನೆ ಹಾಗೂ ಆಡಳಿತ ಎರಡರಲ್ಲೂ ಯಶಸ್ಸು ಗಳಿಸಿರುತ್ತಾರೆ. ಹಾಗಾಗಿ ಅವರಿಗೆ ಮಕ್ಕಳೊಂದಿಗಿನ ಅಪಾರವಾದ ಪ್ರೀತಿ, ಒಡನಾಟ, ಮಕ್ಕಳ ಕಥೆಗಳನ್ನು ಬರೆಯಲು ಪ್ರೇರೇಪಿಸಿರಬೇಕು. ಇನ್ನೊಂದು ವಿಸ್ಮಯ. ಅವರು ನಿವೃತ್ತಿ ಹೊಂದುವ ವರೆಗೂ ಸಾಹಿತ್ಯ ಸೃಷ್ಠಿಯ ಸೂಚನೆಯನ್ನೂ ಕೊಡದೆ ಸುಪ್ತವಾಗಿದ್ದರು. ನಂತರ ಹಠಾತ್ ಸಿಡಿಲಿನಂತೆ ಸಾಹಿತ್ಯ ಸೃಷ್ಠಿಯ ಕೋಡಿಯನ್ನೇ ಸ್ಪೋಟಿಸಿದ್ದಾರೆ.
ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...
READ MORE