ಲೇಖಕ ಗಣೇಶ ಪಿ. ನಾಡೋರ ಅವರ ಕೃತಿ-ಹಾರುವ ಬಯಕೆ. ಮಕ್ಕಳಿಗೆ ಕಥೆಗಳೆಂದರೆ ಇಷ್ಟ. ಕಥೆ ಕೇಳುತ್ತಲೇ ಮಕ್ಕಳು ನೂರೆಂಟು ಪ್ರಶ್ನೆಗಳನ್ನು ಎಸೆಯುತ್ತಾರೆ. ಮಕ್ಕಳು ಜಾಣರೂ ಸೂಕ್ಷ್ಮಮತಿಗಳೂ ಆಗಿರುತ್ತಾರೆ. ಇಲ್ಲಿಯ ಕಥೆಗಳು ಹಳ್ಳಿಯ ಜನಜೀವನ, ದಾರುಣ ಬಡತನ, ಕಪಟವರಿಯದ ಮುಗ್ಧ ಸ್ವಭಾವಗಳನ್ನು ಪರಿಚಯಿಸುತ್ತದೆ. ನಗರ ಜೀವನ ಮತ್ತು ಹಳ್ಳಿಯ ಬದುಕು ಹೀಗೆ ಮಕ್ಕಳ್ಳೆಲ್ಲ ಎಲ್ಲಿದ್ದರೂ ಸಮಾನ ಕುತೂಹಲಿಗಳು. ಉತ್ಸಾಹದಲ್ಲಿ ಯಾರು ಹಿಂದಿಲ್ಲವೆಂದು ಈ ಕಥೆಗಳು ಹೇಳುತ್ತಿವೆ. ಅವಕಾಶ - ಪ್ರೋತ್ಸಾಹ ಎಲ್ಲ ಮಕ್ಕಳಿಗೂ ಸಿಕ್ಕಲ್ಲಿ ಭೇದಭಾವ ಇಲ್ಲ ಎಂಬ ಸಂದೇಶ ಈ ಕಥೆಗಳಲ್ಲಿದೆ.
©2024 Book Brahma Private Limited.