ಮಕ್ಕಳ ಆಸಕ್ತಿಕರ ವಿಚಾರಗಳನ್ನು ಹಿಡಿದುಕೊಂಡು ರೂಪಿತವಾದ ಕೃತಿ ಪರಮೇಶ್ವರಯ್ಯ ಸೊಪ್ಪಿನಮಠ ಅವರ ‘ಟ್ರಿನ್-ಟ್ರಿನ್ ಹಲೋ… ಮಕ್ಕಳ ಸಹಾಯವಾಣಿ’ ಮಕ್ಕಳ ಹಕ್ಕುಗಳಿಗೊಂದು ದಿಕ್ಸೂಚಿ ಕೃತಿ. ಜಳಕ-ಪುಳಕ, ಚಿಗುರಿಗೇಕೆ ಕಾಯಿಯ ಭಾರ, ಅಂತರಂಗ- ಬಹಿರಂಗ, ಶೀಲಾ ಜಯಶೀಲಳಾಗಿ, ನಾವುಗಳೂ ಇಂದಿನ ಪ್ರಜೆಗಳೇ!, ನಮಗೆ ನೀವು, ನಮ್ಮ ಹಕ್ಕು, ನಮ್ಮ ಕ್ಲಬ್… ನಮ್ಮ ಕಾನೂನು, ಪಯಣ ಆರಂಭ, ಹೂ ಅರಳುವ ಸಮಯ ಸೇರಿದಂತೆ 9 ಪರಿವಿಡಿಗಳನ್ನು ಈ ಕೃತಿಯು ಒಳಗೊಂಡಿದೆ.
ಪರಮೇಶ್ವರಯ್ಯ ಸೊಪ್ಪಿಮಠ: 1974 ಸೆಪ್ಟೆಂಬರ್ 21ರಂದು ಬಳ್ಳಾರಿ ಜಿಲ್ಲೆ, ಹಗರಿಬೊಮ್ಮನಹಳ್ಳಿಯಲ್ಲಿ ಜನನ. ಪ್ರಾಥಮಿಕದಿಂದ ಪಿ.ಯು.ವರೆಗೂ ಹ.ಬೊ.ಹಳ್ಳಿಯಲ್ಲಿ ವಿದ್ಯಾಭ್ಯಾಸ. ಶಿಕ್ಷಕ ತರಬೇತಿಯು ತುಮಕೂರಿನ ಸಿದ್ಧಗಂಗಾಮಠದಲ್ಲಿ ಆಯಿತು. ತದನಂತರ ದೂರಶಿಕ್ಷಣದ ಮುಖಾಂತರ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಬಿ.ಎ ಪದವಿ ಹಾಗೂ ಎಂ.ಎ. (ಕನ್ನಡ) ಸ್ನಾತಕೋತ್ತರ ಶಿಕ್ಷಣ. ಎಂ.ಎ. (ಪತ್ರಿಕೋದ್ಯಮ) ಸ್ನಾತಕೋತ್ತರ ಶಿಕ್ಷಣವನ್ನು ಕನ್ನಡ ವಿ.ವಿ. ಹಂಪಿಯಲ್ಲಿ ಅಭ್ಯಾಸ. ಪ್ರಸ್ತುತ ಕನ್ನಡ ವಿ.ವಿ. ಹಂಪಿಯ ಕನ್ನಡ ಅಧ್ಯಯನ ವಿಭಾಗದಲ್ಲಿ “ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ” ವಿಷಯದ ಮೇಲೆ ಪಿಹೆಚ್.ಡಿ. ಅಧ್ಯಯನ. 1998ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸಕ್ಕೆ ಸೇರ್ಪಡೆ. ಶಿಕ್ಷಕಿ ವನಿತಾರೊಂದಿಗೆ ...
READ MORE