ಮಳೆ ಬೀಳದ ಪ್ರದೇಶದ ಮಕ್ಕಳಿಬ್ಬರು ಮಳೆ ಹುಡುಕುತ್ತಾ ಹೊರಡುತ್ತಾರೆ. ಮಲೆನಾಡಿನಲ್ಲಿ ಮಳೆ ಸಿಕ್ಕಿತ್ತು! ಅಲ್ಲಿ ಸೊಂಪಾಗಿ ಬೆಳೆದ ಅರಣ್ಯವಿತ್ತು. ಮಕ್ಕಳಿಗೆ ಅರ್ಥವಾಯ್ತು. ಕಾಡು ಬೆಳೆಸಿದರೆ ಮಳೆ ಬರುವುದೆಂದು. ನಾವೂ ಗಿಡ ಮರ ಬೆಳೆಸೋಣ ಎಂಬುದು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಕವಿ, ಕಥೆಗಾರ ಸೋಮು ಕುದರಿಹಾಳ ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚಂದಾಪುರದವರು. ಕಳೆದ ಹನ್ನೆರಡು ವರ್ಷಗಳಿಂದ ಗಂಗಾವತಿಯ ಕುಂಟೋಜಿ ಲಕ್ಷ್ಮೀಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು. ಇವರಿಗೆ 2018ರ ತಾಲ್ಲೂಕು ’ಉತ್ತಮ ಶಿಕ್ಷಕ ಪ್ರಶಸ್ತಿ, ಗಂಗಾವತಿ ತಾಲ್ಲೂಕಕು ಕರವೇಯಿಂದ ಕನ್ನಡ ಶಿಖಾಮಣಿ ಪ್ರಶಸ್ತ’ಗಳೂ ಲಭಿಸಿವೆ. ಕೃತಿಗಳು: ಜಾಡು ತಪ್ಪಿದ ನಡಿಗೆ (ಕವನ ಸಂಕಲನ). ...
READ MORE