ಎಸ್. ಮಾಲತಿ ಅವರು ಸಂಪಾದಿಸಿದ ಮಕ್ಕಳ ಕತೆಗಳ ಸಂಕಲನ ‘ಬುದ್ಧ ಹೇಳಿದ ಕತೆ’. ಸಮಾನತೆಯ ಆಶಯ ಸಾರುವ ಇಲ್ಲಿಯ ಕತೆ ಶಾಂತಿ ಸೌಹಾರ್ದತೆಯನ್ನು ಆಧರಿಸಿ ರಚಿತವಾಗಿರುವ ಕತೆ ಎಂದರೆ ತಪ್ಪೇನಿಲ್ಲ.
ರಂಗಕರ್ಮಿ, ಬರಹಗಾರ್ತಿ ಎಸ್. ಮಾಲತಿ ಅವರು ಜನಿಸಿದ್ದು 1952 ಮೇ 1ರಂದು ಶಿವಮೊಗ್ಗದಲ್ಲಿ. ತಾಯಿ ಉಮಾ ಶೇಷಗಿರಿ ಪೈ, ತಂದೆ ಶೇಷಗಿರಿ ಪೈ. ದೆಹಲಿಯ ಎನ್.ಎಸ್.ಡಿ ಗರಡಿಯಲ್ಲಿ ಬೆಳೆದುಬಂದವರು. ಇವರು ಬರೆದ ನಾಟಕಗಳೆಂದರೆ ಎರಡು ಕಿರು ನಾಟಕಗಳು, ಶೀಮ ಕಥಾನಕ, ದಲಿತಲೋಕ. ಇವರು ಅನುವಾದಿಸಿದ ನಾಟಕಗಳು ಜನತೆಯ ಶತ್ರು, ರೊಷೊಮನ್, ಒಂದು ಪಯಣದ ಕಥೆ, ಹೊಸದಿಕ್ಕು. ಇವರ ಬರಹಗಳು ನಾಟಕಕ್ಕೆ ಮಾತ್ರ ಸೀಮಿತವಾಗಿರದೇ ಕಾವ್ಯದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕ್ಷಣಿಕವಲ್ಲದ ಕ್ಷಣಗಳು, ಹೇಳಬೇಕೆನಿಸಿದ್ದು, ನನ್ನ ಪ್ರಿಯತಮನ ಬಾಳು, ಭಾವಕೋಶ ಇವರ ಪ್ರಮುಖ ಕವನ ಸಂಕಲನಗಳು. ಸುಮಾರು 42ಕ್ಕೂ ...
READ MOREಹೊಸತು- ನವೆಂಬರ್ -2003
ಮಕ್ಕಳಿಗಾಗಿ ನೀತಿಪಾಠ ಕಲಿಸುವ, ಸಕಲಪ್ರಾಣಿಗಳಲ್ಲೂ ದಯೆ ಇರಿಸಬೇಕಾದ ಅಗತ್ಯವನ್ನು ತಿಳಿಸುವ, ಮಕ್ಕಳಿಗಾಗಿ ಬರೆದ ಮೂರು ಕಿರುನಾಟಕಗಳು. ರಂಗದ ಮೇಲೆ ಈಗಾಗಲೇ ಪ್ರದರ್ಶನಗೊಂಡಿವೆ. ಅನ್ಯಾಯದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಪ್ರತಿಭಟಿಸುವ ಅಗತ್ಯವನ್ನು ಕೊನೆಯ ನಾಟಕ ಧ್ವನಿಸುತ್ತದೆ. ಪ್ರಾಣಿ ಪಕ್ಷಿಗಳನ್ನು ಸುತ್ತಲಿನ ಗಿಡಮರಗಳನ್ನು ಮನುಷ್ಯ ಪ್ರೀತಿಯಿಂದ ನೋಡಿಕೊಳ್ಳಬೇಕಲ್ಲದೆ ಅವುಗಳಿಗೆ ಹಾನಿ ಮಾಡಬಾರದೆಂಬ ಸಂದೇಶ ಇಲ್ಲಿನ ನಾಟಕಗಳಲ್ಲಿ ಮುಖ್ಯವಾಗಿ ಗೋಚರಿಸುತ್ತದೆ.