ಜೀವಿಪ್ರಪಂಚ ಬಲು ರೋಚಕವಾದ ಜಗತ್ತು. ಇಲ್ಲಿರುವ ಪ್ರತಿಯೊಂದು ಜೀವಿಯೂ ಬದುಕಿ ಉಳಿಯಲೆಂದೇ ನಿತ್ಯ ಸಾಹಸ ಪಡುತ್ತಿರುತ್ತದೆ ಎನ್ನುತ್ತದೆ ಲೇಖಕ ಕೊಳ್ಳೇಗಾಲ ಶರ್ಮ ಅವರ ‘ಗುಬ್ಬಿಯ ಬ್ರಹ್ಮಾಸ್ತ್ರ’. ನಮಗೆ ಸಾಮಾನ್ಯ ಎನ್ನಿಸುವ ವಿಷಯಗಳು ಹಲವು ಅಸಾಮಾನ್ಯ ರೀತಿಯವು ಎನ್ನುತ್ತದೆ ಈ ಕೃತಿ. ಆಹಾರಕ್ಕಾಗಿ, ಸ್ಪರ್ಧೆಗಾಗಿ, ಕುಟುಂಬದ ರಕ್ಷಣೆಗಾಗಿ, ವೈರಿಗಳನ್ನು ಬೆದರಿಸಲು, ಬೇಟೆಗಳನ್ನು ಹಿಡಿಯಲು- ಹೀಗೆ ಹತ್ತು ಹಲವು ಕಾರ್ಯಗಳಿಗೆಂದು ವಿವಿಧ ಬಗೆಯ ಉಪಾಯಗಳನ್ನು ಜೀವಿಗಳು ಬಳಸುತ್ತವೆ. ಒಂದು ವೇಳೆ ಅವುಗಳನ್ನು ನಾವು ಮನುಷ್ಯರು ಬಳಸುತ್ತಿದ್ದಿದ್ದರೆ ಅದು ಮಹಾಸಾಹಸ ಎನ್ನಿಸಿಬಿಡುತ್ತಿತ್ತು. ಸಾಧನೆ ಎಂದು ಸನ್ಮಾನ ಪಡೆಯುತ್ತಿತ್ತು. ಅಂತಹ ನಿತ್ಯ ಬದುಕಿನ ಸಾಧನೆ, ಸಾಹಸಗಳನ್ನು ಪರಿಚಯಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ರಾಕ್ಷಸರ ಬಡಿಗೆಯ ನಡುವಿನ ಬದುಕು, ಕುಂಡಿಯಲ್ಲೊಂದು ಬಾಂಬು, ಗರುಡ ಗೆದ್ದಲು, ನಾಲಗೆ ದಾಸ, ರೋಮಬಾಣ, ದಾರದ ಸರದಾರ, ಗುದ್ದಲಿ ಕೊಂಬು, ವಿಷದ ಉಗುಳು, ಭದ್ರ ಶಿರ ಕತೆಗಳನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.