`ಪುಟಾಣಿ ಪಂಟರ್ಸ್’ ಅಶ್ವಿನಿ ಶಾನಭಾಗ ಅವರ ಮಕ್ಕಳ ಕಾದಂಬರಿಯಾಗಿದೆ. ಈ ಕತೆಯಲ್ಲಿ ಎರಡು ಮುಖ್ಯವಾದ ವಿಷಯಗಳು ಎಂದರೆ ಮಕ್ಕಳು ತೋರುವ ಕುತೂಹಲ ಮತ್ತು ಸಹಾನುಭೂತಿ. ಈ ಕತೆಯಲ್ಲಿ ಬರುವ ಮೂವರು ಮುಖ್ಯ ಪಾತ್ರಗಳು - ಆರ್ಯ, ಮೀರಾ ಮತ್ತು ಅಪ್ಪು, ನಮ್ಮ ಮನೆಗಳಲ್ಲಿ ಅಥವಾ ಸುತ್ತಮುತ್ತ ನೋಡಿರುವ ಮಕ್ಕಳನ್ನು ನೆನಪಿಸುತ್ತಾರೆ. ಅವರು ಆಡುವ ಸ್ಕೂಟರ್ ಆಟ, ಹಿರಿಯರಿಂದ ಬಚ್ಚಿಟ್ಟುಕೊಂಡು ಚಾಕಲೇಟ್ ತಿನ್ನೋದು, ಜೇಬಿನಲ್ಲಿ ಸದಾ ತಿನ್ನಲು ಏನಾದರೂ ಇಟ್ಟುಕೊಳ್ಳುವುದು, ತಮ್ಮ ಕೆಲಸ ಆಗಬೇಕು ಅಂತ ಪೋಷಕರಿಗೆ ಪೂಸಿ ಹೊಡಿಯುವುದು ಮಕ್ಕಳಿಗೆ ಇಷ್ಟವಾಗುತ್ತೆ. ಈ ಮೂವರು ಮಕ್ಕಳು ಕಾಲೋನಿಯಲ್ಲಿ ಇರುವ ದೊಡ್ಡ ಮಕ್ಕಳೊಂದಿಗೆ ಸೇರಿ ಬೆಕ್ಕಿನ ಮರಿಗಳ ಮೇಲಿರುವ ಪ್ರೀತಿಗಾಗಿ ಮಾಡುವ ಕೆಲಸಗಳು ರೋಚಕವಾಗಿವೆ. ಕತೆಯಲ್ಲಿ ಬರುವ, ಮಕ್ಕಳು ಹೆದರುವ ಶಿಸ್ತಿನ ಕರ್ನಲ್ ಅಂಕಲ್ ಪಾತ್ರ ಮನಸಲ್ಲಿ ಉಳಿಯುತ್ತೆ. ಈ ಪುಸ್ತಕದಲ್ಲಿ ಮಕ್ಕಳ ಮನಸನ್ನು ಸೆರೆಹಿಡಿಯುವಲ್ಲಿ ಲೇಖಕರು ಅದ್ಭುತ ಕೆಲಸವನ್ನು ಮಾಡಿದ್ದಾರೆ.
ಅಶ್ವಿನಿ ಶಾನಭಾಗ ಹುಟ್ಟಿ ಬೆಳೆದ ಊರು ಕರ್ನಾಟಕದ ಕರಾವಳಿಯ ಕುಮಟಾ ತಾಲೂಕಿನ ಹರಕಡೆ ಅನ್ನೋ ಪುಟ್ಟ ಹಳ್ಳಿ, ಅಪ್ಪ ಕೃಷಿಕ, ಅಮ್ಮ ಶಿಕ್ಷಕಿ. ಪ್ರೌಢ ಶಿಕ್ಷಣವನ್ನು ಕುಮಟಾದ ಗಿಬ್ ಬಾಲಕಿಯರ ಪ್ರೌಢಶಾಲೆಯಲ್ಲಿ ಮುಗಿಸಿ, ಶಿರಸಿಯ ಎಂ.ಇ.ಎಸ್ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಮುಗಿಸಿದ್ದಾರೆ. ಪದವಿಯ ನಂತರ ಬೆಂಗಳೂರಿನ ಕೆಲವು ಅಂತರಾಷ್ಟ್ರೀಯ ಕಂಪನಿಗಳಲ್ಲಿ ಸ್ವಲ್ಪ ವರ್ಷಗಳ ಕಾಲ ಕಾರ್ಯನಿರ್ವಹಿಸಿರುವ ಅವರು ಸದ್ಯ ಗೃಹಿಣಿಯಾಗಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ತಮ್ಮ ಎರಡು ವರ್ಷದ ಮಗನಿಗೆ ಕನ್ನಡದ ಪ್ರಾರಂಭಿಕ ಕಲಿಕೆಯನ್ನು ಶುರು ಮಾಡಬೇಕು ಅಂದುಕೊಂಡಾಗ ಎದುರಾದ ಸಮಸ್ಯೆಗಳು “ಕನ್ನಡ ಅಂಕಲಿಪಿ” ಪುಸ್ತಕದ ರಚನೆಗೆ ಕಾರಣವಾಯಿತು ...
READ MORE