ಮಕ್ಕಳ ಮನೋವಿಕಾಸಕ್ಕೆ ಹಾಗೂ ಮನರಂಜನೆಗಾಗಿ ಬರೆದ ಸಣ್ಣ ಸಣ್ಣ ಕಥೆಗಳ ಸಂಕಲನವಿದು-ಗುಲಗಂಜಿ. ಲೇಖಕ ಜೆ.ಪಿ.ರಾಜರತ್ನಂ ಅವರು ಈಗಾಗಲೇ ಕಡಲೆಪುರಿ, ತತ್ತೂರಿ, ಚುಟಕ ಇತ್ಯಾದಿ ಮಕ್ಕಳಿಗಾಗಿ ಬರೆದ ಕೃತಿಗಳ ಮುಂದುವರಿದ ಭಾಗವಾಗಿ ಇಲ್ಲಿಯ ಕಥೆಗಳಿವೆ. ಸಣ್ಣ ಸಣ್ಣ ಕಥೆಗಳ ಮೂಲಕ ಮಕ್ಕಳ ಓದು ಆಸಕ್ತಿ ಹುಟ್ಟಿಸಬೇಕು. ಮನರಂಜಿಸಬೇಕು ಹಾಗೂ ಪರಿಣಾಮಕಾರಿಯಾಗಿಸಬೇಕು ಎಂಬುದು ಇದರ ಹಿಂದಿನ ಉದ್ದೇಶ.
ಗದ್ಯ ಬೇಜಾರಾದರೆ ಪದ್ಯ ಓದು, ಪದ್ಯ ಬೇಜಾರಾದರೆ ಗದ್ಯ ಓದು. ಎರಡೂ ಬೇಜಾರಾದರೆ ಪುಸ್ತಕ ಮುಚ್ಚಿ ಇಡು. ಆಡುವುದಕ್ಕೆ ಓಡು ಎಂದು ಪ್ರಸ್ತಾವನೆಯಲ್ಲಿ ಲೇಖಕರು ಬರೆಯುವ ಮೂಲಕ ಮಕ್ಕಳಿಗೆ ಓದು-ಬರೆಹ ಮಾತ್ರ ಮುಖ್ಯವಲ್ಲ; ಆಟವೂ ಸಹ ಎಂದು ಎಚ್ಚರಿಸಿದ್ದಾರೆ. ಮಕ್ಕಳಿಗೆ ಇಲ್ಲಿಯ 12 ಕಥೆಗಳು ಅಪ್ಯಾಯಮಾನವಾಗಿವೆ.
©2024 Book Brahma Private Limited.