"ಮಕ್ಕಳ ಹಿತೈಷಿ" ಮನೋವಿಕಾಸದ ಬಲವರ್ಧನೆಯ ಕೃತಿ ಮಕ್ಕಳ ಮನಸ್ಸು ಹೂವಿನ ಹಾಗೆ. ಚಿಕ್ಕವರಿದ್ದಾಗ ಅದೊಂದು ಬಿಳಿಯ ಹಾಳೆ. ಅಲ್ಲಿ ಏನು ಗೀಚುತ್ತೇವೋ ಅದೇ ಬಲಾಢ್ಯವಾಗಿ ಬೆಳೆಯುತ್ತದೆ. ಇಂತಹ ಅರಳುವ ಮನಸ್ಸುಗಳ ಬಗ್ಗೆ ಅನೇಕ ಮಕ್ಕಳ ಸಾಹಿತಿಗಳು ಸಾಕಷ್ಟು ಬರೆದಿದ್ದಾರೆ. ಓದುವ ರೂಢಿ ಹೆಚ್ಚಬೇಕು. ಪಾಲಕರು, ಶಿಕ್ಷಕರು ಹಾಗೂ ಮಕ್ಕಳಲ್ಲಿ ಈ ಕುರಿತು ಮಾರ್ಗದರ್ಶನದ ಅವಶ್ಯಕತೆ ಇದೆ. ಮಕ್ಕಳ ಮನೋವಿಕಾಸ ಬಲವರ್ಧನೆಗಾಗಿ ಬಂದಿರುವ ಅನೇಕ ಪುಸ್ತಕಗಳ ಸಾಲಿಗೆ ಮಕ್ಕಳ ಹಿತೈಷಿ ಪುಸ್ತಕವು ಒಂದಾಗಿದೆ. "ಮಕ್ಕಳ ಹಿತೈಷಿ" ಕಥಾಸಂಕಲನ ಪ್ರೌಢ ಮಕ್ಕಳನ್ನು ಕೇಂದ್ರವಾಗಿಸಿಕೊಂಡು ಹೆಣೆದ ಕೃತಿ. ಪಾಲಕರು ಮತ್ತು ಶಿಕ್ಷಕರನ್ನೊಳಗೊಂಡಂತೆ ಪ್ರತಿಯೊಬ್ಬರೂ ಮಕ್ಕಳ ಬಾಲ್ಯಜೀವನದಲ್ಲಿ ಒಂದಿಲ್ಲ ಒಂದು ಕಾರಣದಿಂದ ಹಿತೈಷಿಗಳಾಗಿ ಕಾಣುತ್ತಾರೆ. ಒಮ್ಮೊಮ್ಮೆ ಶತ್ರುಗಳಂತೆಯೂ ಪರಿಣಮಿಸುತ್ತಾರೆ. ಇದರಲ್ಲಿ ಬರುವ ಕಥೆಗಳು ಮಕ್ಕಳ ಮನಸ್ಸನ್ನು ಅರಳಿಸಿ ಸ್ಪೂರ್ತಿ ತುಂಬುವ ಕೆಲವು ಕಥೆಗಳಿದ್ದರೆ, ಬಾಲ್ಯ ವಿವಾಹ, ಕೌಮಾರ್ಯ, ಅಪರಾಧ ಪಾಲಕರ ಬೇಜವಾಬ್ಧಾರಿ, ಧೈರ್ಯ ಸಾಹಸ, ಪ್ರತಿಷ್ಠೆ ಬಡತನ ಹಕ್ಕು ಬಾಧ್ಯತೆಗಳು, ಐಕ್ಯತೆ , ಸಮಾನತೆ ಬಿಂಬಿಸುವ ರೋಚಕ ಕಥೆಗಳನ್ನು ಕಾಣಬಹುದಾಗಿದೆ. ತಂದೆ ತಾಯಿಯವರನ್ನು ವೃದ್ಧಾಶ್ರಮದಿಂದ ಹೊರತರುವ ಮಕ್ಕಳ ಸಾಹಸದ ಕಥೆ, ಹೀಗೆ ಹೇಳುತ್ತಾ ಹೋದರೆ ಮಕ್ಕಳ ಹಿತೈಷಿ ಪ್ರತಿಯೊಬ್ಬರಿಗೆ ಒಂದು ಮಾರ್ಗದರ್ಶಿ ಕೈಪಿಡಿಯಾಗಿ ಕಾಣುವುದು.
©2024 Book Brahma Private Limited.