ಸದಾ ಮಕ್ಕಳೊಂದಿಗೆ ಬೆರೆಯುವ ತಾವು ಮಕ್ಕಳಿಗೆ ಒತ್ತಕ್ಷರವಿಲ್ಲದ ಕಥೆಗಳನ್ನು ರಚಿಸುವ ಮೂಲಕ ಆಸಕ್ತಿ ಹುಟ್ಟಿಸುವ ಪ್ರಯತ್ನವಾಗಿ ಹೊಸ ಪ್ರಯೋಗ ನಡೆಸಿದ್ದೇ ಈ ಕೃತಿ-ಚೌರೀಶನ ಕಥೆಗಳು. ಲೇಖಕ ಲಕ್ಷ್ಮಣ ಚೌರಿ ಅವರು, ಮಕ್ಕಳ ಸಾಹಿತ್ಯ ಸರಳವಾದಷ್ಟು ಚೆಲುವು ಹೆಚ್ಚುತ್ತದೆ ಮಾತ್ರವಲ್ಲ; ಅದು ಅವರ ಕಲ್ಪನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮಕ್ಕಳ ಸಾಹಿತ್ಯದಲ್ಲಿ ಪಾಂಡಿತ್ಯ ಪ್ರದರ್ಶನ ಸಲ್ಲದು. ಈ ನಿಟ್ಟಿನಲ್ಲಿ ತಮ್ಮ ಕೃತಿಯು ಒಂದು ಪ್ರಯೋಗಶೀಲತೆ ಎಂದು ಅವರು ಹೇಳಿಕೊಂಡಿದ್ದಾರೆ. ಜಾಣ ಹುಡುಗಿ, ನಕಲು, ಸಹಾಯ, ಗೌಡನ ತೋಟ, ಮೂವರು ಗೆಳೆಯರು, ಚೇರಮನ್ ರ ಛೀಮಾರಿ, ಮೊಬೈಲ್ ಹೀಗೆ ವಿವಿಧ ಕಥೆಗಳ ಸಂಕಲನ ಇದಾಗಿದೆ.
ಲಕ್ಷ್ಮಣ ಎಸ್. ಚೌರಿ ಅವರು ಮೂಲತಃ ಬಾಗಲಕೋಟೆ ಜಿಲ್ಮಲೆಯ ಜಮಖಂಡಿ ತಾಲೂಕಿನ ಅಡಿಹುಡಿಯ ತೋಟದಮನೆಯವರು. ವೃತ್ತಿಯಿಂದ ಶಿಕ್ಷಕರಾಗಿ ರಾಯಬಾಗ ತಾಲೂಕಿನ ಕುಡಚಿ ಅಜಿತಬಾನೆ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮುಖ್ಯಗುರುಗಳಾಗಿ 34 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಭಾಷಾ ಕೌಶಲವನ್ನು ವೃದ್ಧಿಸಲು ಒತ್ತಕ್ಷರವಿಲ್ಲದ ಕಥೆಗಳನ್ನು ಬರೆಯುವುದು ರೂಢಿಸಿಕೊಂಡಿದ್ದಾರೆ. ಈ ಕಲೆಯು ಹೊಸ ಬಂಧವನ್ನು ಹಾಗೂ ಹೊಸ ಪ್ರಯೋಗವನ್ನು ಸೃಷ್ಟಿಸಿದೆ. ಕೃತಿಗಳು: ಚೌರೀಶನ ಕಥೆಗಳು (ಒತ್ತಕ್ಷರವಿಲ್ಲದ ಕಥೆಗಳ ಸಂಕಲನ), ’ಹೊಂಬೆಳಕು’ (ಸಂಪಾದಿತ ಕೃತಿ), ’ಆಕಾಶ ಕಾವ್ಯ’ (ಸಂಪಾದಿತ ಕೃತಿ), ’ಮಗು ನೀ ನಗು’ (ಮಕ್ಕಳ ಕವಿತೆಗಳು), ’ನೂರು ಹನಿ’ (ಹನಿಗವನಗಳು), ’ಉಪ್ಪಾರ ಕ್ರಾಂತಿ’ (ಸಂಪಾದಿತ ...
READ MORE