“ಕುಹೂ ಕುಹೂ ಕೋಗಿಲೆ.” ಎಂಬ ಶೀರ್ಷಿಕೆಯ ಈ ಪದ ಓದಿದಾಗ ಮೃದುವಾದ ಸಂತೋಷದ ಅಲೆ. ಮುದ್ದಾದ ಮಕ್ಕಳ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಜೀವ ಮಿಡಿತದ ಸದ್ದಾಗಿರುವ ಮಕ್ಕಳ ನೀತಿಕಥೆಗಳು ಮನುಷ್ಯನ ಜೀವನದಲ್ಲಿ ಒಂದು ಪಾಠವಾಗಿ ರೀತಿಗೆ ನೀತಿಯಾಗಿ ನಮ್ಮ ಬದುಕಿನಲ್ಲಿ ಬೆಳಕಾಗಿ ಬದುಕಿಸುತ್ತವೆ. ಮನುಷ್ಯನಿಗೆ ಎಷ್ಟು ನೀತಿಗಳಾದರೂ ಓದಿ ತಿಳಿದು ಅರಗಿಸಿ ನಿತ್ಯ ನಮ್ಮ ಬದುಕಿನಲ್ಲಿ ನೋವನ್ನು ಅನುಭವಿಸಿ ಬಂದು ಬಸವಳಿಯುವ ಮನಸ್ಸಿಗೆ ನಕ್ಕು ನಲಿಸುತ, ಓದಿ ತಿಳಿಸುತ, ಮನಸ್ಸು ಶಾಂತ ನಿರ್ಮಲವನ್ನಾಗಿಸುವ ಶಕ್ತಿ ಮಕ್ಕಳ ನೀತಿ ಕಥೆಗಳಾಗಿದೆ. ಮಕ್ಕಳ ನೀತಿಕಥೆಗಳು ಕೇವಲ ಮಕ್ಕಳು ಮಾತ್ರ ಓದುವಂತಹದ್ದಲ್ಲ. ದೊಡ್ಡವರು ಓದಿ ತಮ್ಮ ಬದುಕಿನಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿ ನಲಿದು ಕುಣಿದು ನೋವನ್ನು ಮರೆತರೆ ಅದು ಸ್ವರ್ಗವೆ ? ಕನ್ನಡ ಸಾಹಿತ್ಯವು ಮಕ್ಕಳ ಕಥೆಗಳ ಕಣಜವಾಗಿದೆ. ಹಾಗಾಗಿ ಚಿತ್ತಾಕರ್ಷಿತವಾಗಿ ನೀತಿವಂತ ಕಥೆಗಳನ್ನು ಬರೆಯುವದು ಒಂದು ಸಾಹಸದ ಕೆಲಸವೇ! ಇಲ್ಲಿರುವ ಪ್ರತಿಯೊಂದು ಕಥೆಯಲ್ಲಿ ಒಂದೊಂದು ನೀತಿ ಅಡಕವಾಗಿದೆ. ಹಲವು ವೈಶಿಷ್ಟ್ಯಗಳಿಂದ ಕೂಡಿದ “ಕುಹೂ ಕುಹೂ ಕೋಗಿಲೆ" ಯ ಸಂಕಲನಕ್ಕೆ ಕಥೆಗಾರರಾಗಿ ಮತ್ತು ಸಂಪಾದಕರಾಗಿ 'ಪಂಚಾಮೃತ' ದಂತೆ ಐದು ಜನ ಕಥೆಗಾರರು ರೂಪತಾಳಿದ್ದಾರೆ. ಅದಕ್ಕೆ ಕಾರಣೀಭೂತರು ತಯಬಲಿ, ಆ. ಹೊಂಬಳ ಅವರು, ಇಲ್ಲಿ ಬಂದಿರುವ ಕಥೆಗಳು ಅರ್ಥಗರ್ಭಿತವಾಗಿ ನೀತಿಗೆ ನೀತಿಯನ್ನು ಪೋಣಿಸುತ್ತ ಓದುಗರ ತನು ಮನವನ್ನು ತದೇಕಚಿತ್ತವಾಗಿ ಸೆರೆಹಿಡಿದಿವೆ. 21ನೇ ಶತಮಾನದಲ್ಲಿ ದೊಡ್ಡವರಿಗೆ ನೀತಿಕಥೆಗಳು ಅವಶ್ಯವಿದೆಯೇ ಹೊರತು ಮಕ್ಕಳಿಗಿರಲಿಲ್ಲ! ಮಕ್ಕಳು ದೊಡ್ಡವರ ನಕಲು ಮಾಡುವದು ಸುಲಭ, ಆದರೆ ದೊಡ್ಡವರು ಮಕ್ಕಳ ಮನೋಭೂಮಿಕೆ ಯನ್ನು ಪ್ರವೇಶಿಸುವುದು ಕಷ್ಟ ಈ ಕಥೆಗಳಲ್ಲಿ ಬರುವಂತಹ ಪಾತ್ರಗಳು, ಸನ್ನಿವೇಶಗಳು ಮತ್ತು ಕಥಾಹಂದರಗಳು ಉತ್ತಮವಾಗಿ ಸೊಗಸಾಗಿ ಸಾಂದರ್ಭಿಕವಾಗಿ ಕಥೆಗಳನ್ನು ಬರೆದಂತಹ ಶ್ರೀಮತಿ ಅನುರಾಧಾ ಕುಲಕರ್ಣಿ, ತಯಬಲಿ ಅ, ಹೊಂಬಳ, ಶ್ರೀಮತಿ ಭಾಗ್ಯಲಕ್ಷ್ಮಿ ಮಗ್ಗೆ, ಕೊಮಲ್ಲಿ ಸತ್ಯನಾರಾಯಣ ಮತ್ತು ಶ್ರೀಮತಿ ಪ್ರೀತಿಭರತ ಸಾಹಿತಿಗಳು, ಈ ಮಕ್ಕಳ ಸಾಹಿತಿಗಳ ವಿಚಾರಧಾರೆಯಿಂದ ಮೂಡಿ ಬಂದಿರುವ ಕಥೆಗಳು ಮಕ್ಕಳಷ್ಟೇ ಅಲ್ಲದೇ ಎಲ್ಲ ವಯಸ್ಸಿನವರೂ ಈ ಕಥೆಗಳನ್ನು ಓದಿ ನೀತಿವಂತರಾಗಬಹುದಾದಂತಹ ಪುಸ್ತಕವೇ “ಕುಹೂ ಕುಹೂ ಕೋಗಿಲೆ” ಮಕ್ಕಳ ನೀತಿಕಥಾ ಸಂಕಲನ.
©2024 Book Brahma Private Limited.