‘ಕಲ್ಲುಸಕ್ಕರೆ -2 ಸಂಧ್ಯಾಮಾಮಿ ಹೇಳಿದ ಪ್ರಾಣಿಗಳ ಕಥೆಗಳು ’ ಕೃತಿಯು ಸಂಧ್ಯಾ ಪೈ ಅವರ ಮಕ್ಕಳ ಕಥಾಸಂಕಲನವಾಗಿದೆ. ಇಲ್ಲಿ ಕ್ಲಾಸಿಕ್ ಕತೆಗಳು, ಪ್ರಾಣಿಗಳ ಕತೆಗಳು, ಬುದ್ಧಿವಂತರ ಕತೆಗಳು, ಜಾಣರ ಕತೆಗಳು, ಗಮ್ಮತ್ತಿನ ಕತೆಗಳು ಹೀಗೆ `ಕಲ್ಲುಸಕ್ಕರೆ‘ ಸರಣಿಯಲ್ಲಿ ಐದು ಪುಸ್ತಕಗಳಲ್ಲಿ ಸಂಧ್ಯಾಮಾಮಿಯು ಮಕ್ಕಳಿಗೆ ಕತೆಯನ್ನು ಹೇಳಿದ್ದಾರೆ. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನವು ಮಕ್ಕಳ ಕತೆಗಳಿಗೆ ಅಷ್ಟೇ ಪ್ರಾಮುಖ್ಯತೆ ಕೊಟ್ಟು ಪ್ರಕಟಿಸುವ ಕೆಲಸ ಮಾಡಿದೆ. ಮಕ್ಕಳಿಗೆ ಮುದ ನೀಡುವ ಚಿತ್ರಗಳಿವೆ. ಒಳಗಿನ ಚಿತ್ರಗಳು ಕಪ್ಪು ಬಿಳುಪು ಎಂಬುದನ್ನು ಬಿಟ್ಟರೆ ಪುಸ್ತಕ ಬಣ್ಣದ ಚಿತ್ರಗಳಿಂದ ತುಂಬಿದೆ. ಕತೆಗಳಲ್ಲಿ ಯಾವುದೇ ‘ಇಸಂ’ ಇರದ ಕಾರಣ ಮಕ್ಕಳಿಗೆ ಪ್ರಿಯವಾಗುತ್ತದೆ.
ಮಣಿಪಾಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ವಿಭಾಗದ ಗೌರವ ನಿರ್ದೇಶಕಿಯಾಗಿರುವ ಸಂಧ್ಯಾ ಎಸ್. ಪೈ ಅವರು ಪತ್ರಿಕೋದ್ಯಮಿ, ಲೇಖಕಿ. ತರಂಗ ವಾರಪತ್ರಿಕೆ ಸೇರಿದಂತೆ ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ನಾಲ್ಕು ಪತ್ರಿಕೆಗಳಿಗೆ ಸಂಪಾದಕಿ ಆಗಿದ್ದಾರೆ. ಸಂಧ್ಯಾ ಅವರು ಜನಿಸಿದ್ದು ಚಿಕ್ಕಮಗಳೂರಿನಲ್ಲಿ 1947ರ ಫೆಬ್ರುವರಿ 26ರಂದು. ತಂದೆ ಬಿ. ನಾರಾಯಣ ಬಾಳಿಗಾ ಹಾಗೂ ತಾಯಿ ಸುಮಿತ್ರಾದೇವಿ. ಇದು ಈಜಿಪ್ಟ್ ಇದು ಇಸ್ರೇಲ್ (ಪ್ರವಾಸ ಕಥನ), ಸಂಪಾದಕೀಯ ಅಂಕಣಗಳಾದ ’ಪ್ರಿಯ ಓದುಗರೇ’ ಬರಹಗಳ 10 ಸಂಪುಟಗಳು ಪ್ರಕಟವಾಗಿವೆ. ಕೊಂಕಣಿ ರಾಂದಪ (ಕನ್ನಡ, ಇಂಗ್ಲಿಷ್ ಆವೃತ್ತಿ). ಯಕ್ಷಪ್ರಶ್ನೆ, ಪರಂಪರೆಯ ಪುಟಗಳಿಂದ (ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳ ...
READ MORE