ನೀತಿ ಕತೆಗಳನ್ನು ಆಧರಿಸಿದ ಕೃತಿ ಜಾಣ ಕಥೆಗಳು. ಬೇರೆ ಬೇರೆ ಲೇಖಕರ ಉತ್ತಮ ಕಥೆಗಳನ್ನು ಆಯ್ದುಕೊಂಡಿರುವ ಕಥೆಗಳಿವೆ. ಪ್ರತಿ ಕತೆಯು ಜೀವನದಲ್ಲಿ ಕಲಿಯಲೇ ಬೇಕಿರುವ ನೀತಿಯನ್ನು ವಿವರಿಸುತ್ತದೆ. ಮಣ್ಣಿನಿಂದ ಹೊನ್ನು ಬೆಳೆಯುವ ಕತೆ, ಜಾಣತನದಿಂದ ಸರಿಯಾದದ್ದನ್ನು ಕಲಿಯುವ ಕತೆ ಸೇರಿದಂತೆ ಇತರೆ ಕಥೆಗಳು ನೀತಿಪ್ರಧಾನವಾಗಿ ಮಕ್ಕಳ ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಉಂಟು ಮಾಡುತ್ತವೆ.