ಲೇಖಕಿ ವೇದಾಮಂಜುನಾಥನ್ ಅವರ ಮಕ್ಕಳ ಕಥಾಸಂಕಲನ 'ಹಾರುವ ಚಿಟ್ಟೆಗಳು'. ಹಾರುವ ಚಿಟ್ಟೆಗಳು ಕಥಾಸಂಕಲನದಲ್ಲಿ ಒಟ್ಟು 25 ಸಣ್ಣ ಸಣ್ಣ ಕಥೆಗಳಿವೆ. ಮಲೆಕಾನು, ದೀಪದ ಬುಡ, ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ, ಅಜ್ಜಿಮನೆ, ರಾಜು ಮತ್ತು ತೋಟದ ಮಾಲಿ, ಗಾಜಿನ ಮನೆ, ಮೀರಾಳ ಮೊದಲ ಕವನ, ಚಿಗುರುವ ಬಳ್ಳಿ, ಕುರಿಮರಿ, ಬುದ್ಧಿವಂತ ಮೇಕೆ, ಇನ್ನಿತರೆ ಕಥೆಗಳಲ್ಲದೆ, ತೆನಾಲಿ ರಾಮಕೃಷ್ಣನ ಎರಡು ಕಥೆಗಳು, ಕವಿಗಳ ಪರಿಚಯ, ಹಂಪಿ ಸ್ಥಳ ಪರಿಚಯಗಳನ್ನು ಸಂಕಲನವು ಒಳಗೊಂಡಿದೆ. ಈ ಕಥೆಗಳನ್ನು ಮಕ್ಕಳು ಓದಬಹುದು ಅಥವ ಹಿರಿಯರು ಓದಿ ಮಕ್ಕಳಿಗೆ ಹೇಳಬಹುದಾಗಿದೆ. ಪ್ರತಿಯೊಂದು ಕಥೆಗಳ ಕೊನೆಯಲ್ಲಿ ಒಂದು ನೀತಿ ಇದೆ. ಇನ್ನು ಮಲೆಕಾನು ಎಂಬ ಕಥೆಯು 'ಕೋಲ್ಯಾನ ಕನಸು' ಎಂಬ ಶೀರ್ಷಿಕೆಯೊಂದಿಗೆ ಚಲನಚಿತ್ರಕ್ಕೆ ಆಯ್ಕೆ ಆಗಿದೆ.
©2024 Book Brahma Private Limited.