ಲೇಖಕಿ ರಜನಿ ನರಹಳ್ಳಿ ಅವರ ತಮ್ಮ ಮೊಮ್ಮಗಳಿಗಾಗಿ ಹೇಳಿದ ಕತೆಗಳಿವು. ಮೊಮ್ಮಗಳಿಗೆ ಹೇಳಿದ ಕತೆಗಳಾದರೂ ಅವು ಬಂದದ್ದು ಅವರು ಬಾಲ್ಯದಲ್ಲಿ ಕೇಳಿದ ಕತೆಗಳನ್ನು ಆಧರಿಸಿದವು. ಈ ಸಂಕಲನದ ಬಗ್ಗೆ ಹಿರಿಯ ಮಕ್ಕಳ ಸಾಹಿತಿ ಆನಂದ ಪಾಟೀಲ ಅವರು ’ಹಳ್ಳಿವಾಡದಿಂದ ಹರಿದು ಬಂದ ಮತ್ತಷ್ಟು ರಮ್ಯ, ರಂಜಕ ಕಥನಗಳ ಕಟ್ಟು ಇಲ್ಲಿನದು, ಅದ್ಭುತ, ಚಾತುರ್ಯ, ಮಾಂತ್ರಿಕತೆಯ ಗೂಢ ಎಲ್ಲವುಗಳ ನಡುವೆ ಹಾಯ್ದು ಬರುತ್ತ ಈ ಕತೆಗಳು ಮತ್ತೆ ಮತ್ತೆ ನಮ್ಮ ನಡುವಿನವೇ ಆಗಿ ಹೊಸಹೊಸತಾಗಿ ಪ್ರಸ್ತುತವಾಗತೊಡಗುತ್ತವೆ. ಅದೇ ಮನುಷ್ಯನ ಹಂಬಲಗಳು, ನಿಲ್ಲದ ಆಕಾಂಕ್ಷೆಗಳು, ಬದುಕಿನ ಯಾವುಯಾವುದೊ ಆಸರೆಗಳು, ನೋವುಗಳು, ನಿರಸೆಗಳು ಎಲ್ಲವುಗಳನ್ನ ಕತೆಯ ಗುಂಗಿನಲ್ಲಿ ಬಿಚ್ಚಿಡುತ್ತ ಎಲ್ಲ ಮರೆತು ಕಳೆಯುವ ಒಂದಿಷ್ಟು ಸಮಯ ಹುಟ್ಟು ಹಾಕುತ್ತವೆ ಇವು’ ಎಂದುಗು ಮೆಚ್ಚುಗೆ ಸೂಚಿಸಿದ್ದಾರೆ. ಸರಾಗವಾಗಿ ಓದಿಸಿಕೊಂಡು ಹೋಗುವ ಗುಣ ಈ ಪುಸ್ತಕದ ವಿಶೇಷ.
ರಜನಿ ನರಹಳ್ಳಿ ಅವರು ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆಯವರು. ಮೈಸೂರು ಮಹಾರಾಣಿ ಕಾಲೇಜಿನಿಂದ ಬಿ.ಎ.ಪದವೀಧರರು. ಸದ್ಯ, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕೃತಿಗಳು: ನನ್ನು ಅಜ್ಜಿಯ ಜಗತ್ತು, ಆತ್ಮವೃತ್ತಾಂತ, ಅಮ್ಮಮ್ಮ ಹೇಳಿದ ಕತೆಗಳು, ಸಂಸ್ಕೃತಿ ಪೋಷಕ ಲಕ್ಷ್ಮೀ ನಾರಾಯಣ ಪ್ರಶಸ್ತಿ-ಪುರಸ್ಕಾರಗಳು: ವೀಚಿ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ ಗಳು ಲಭಿಸಿವೆ. ...
READ MORE