ಬುದ್ಧನ ಜಾತಕ ಕಥೆಗಳ ಮೂಲಕ ಬುದ್ಧ ಕಂಡುಕೊಂಡ ಸತ್ಯವನ್ನು ತಿಳಿಸುವುದು ಇದರ ಮೂಲ ಉದ್ದೇಶ. ಬುದ್ಧನ ಜಾತಕ ಕಥೆಗಳೆಂದೇ ಖ್ಯಾತಿಯ ಕಥೆಗಳನ್ನು ಮಕ್ಕಳಿಗೆ ತಿಳಿ ಹೇಳುವ ಈ ಕೃತಿಯನ್ನು ಈಶ್ವರಚಂದ್ರ ಅವರು ಸಂಗ್ರಹಿಸಿ, ಸರಳವಾಗಿ ಬರೆದಿದ್ದಾರೆ.
ಕನ್ನಡದ ಪ್ರಸಿದ್ಧ ಕಥೆಗಾರ ಈಶ್ವರಚಂದ್ರರು ಜುಲೈ 14, 1946ರಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೋದಿಗೆರಿಯಲ್ಲಿ ಜನಿಸಿದರು. ತಂದೆ ಎಚ್.ಎನ್. ರಾಮರಾವ್ ಅವರು ಮತ್ತು ತಾಯಿ ಪದ್ಮಾವತಮ್ಮನವರು. ಈಶ್ವರ ಚಂದ್ರರ ಪ್ರಾರಂಭಿಕ ಶಿಕ್ಷಣ ಚನ್ನಗಿರಿ, ಸಾಗರ, ಶಿವಮೊಗ್ಗಗಳಲ್ಲಿ ನಡೆದವು. ಮುಂದೆ ಭದ್ರಾವತಿಯಲ್ಲಿ ಡಿಪ್ಲೊಮಾ ಪೂರೈಸಿದ ಅವರು ಬೆಂಗಳೂರು ವಿಮಾನ ಕಾರ್ಖಾನೆಯ ‘ವಿಮಾನ ಸಂಶೋಧನೆ ಮತ್ತು ವಿನ್ಯಾಸ’ ಕೇಂದ್ರವನ್ನು ಸೇರಿ ನಲವತ್ತು ವರ್ಷಗಳ ಸುದೀರ್ಘಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದ ಕಡೆ ಒಲವು ತಳೆದ ಈಶ್ವರಚಂದ್ರರು ತಂದೆ ಹೇಳುತ್ತಿದ್ದ ಭಾರತ, ಭಾಗವತ, ರಾಮಾಯಣ ಕಾವ್ಯ, ಕಥೆಗಳಿಂದ ಪ್ರೇರಣೆ ಪಡೆದರು. ...
READ MORE