ಲೇಖಕ ಬಿ. ಜನಾರ್ದನ ಭಟ್ ಅವರ ಸಂಪಾದಿತ ಕೃತಿ-ಮಕ್ಕಳ ಲೋಕದ ಕಥೆಗಳು. ಪಂಚತಂತ್ರ, ವಿಕ್ರಮ ಬೇತಾಳ, ಜಾನಪದೀಯ, ಈಸೋಪ, ಅಕ್ಬರ್-ಬೀರಬಲ್, ತೆನಾಲಿರಾಮನ ಕಥೆಗಳು ಹೀಗೆ ಕನ್ನಡದಲ್ಲಿ ಮಕ್ಕಳ ಸಾಹಿತ್ಯ ವಿಫುಲವಾಗಿದ್ದರೂ ಅವುಗಳ ಸಂಪಾದನೆ ಕಾರ್ಯ ಮುಂದುವರಿದಿದೆ. ಹೊಸ ಹೊಸ ರೂಪದಲ್ಲಿ, ಕಲ್ಪನೆಯಲ್ಲಿ ಈ ಕಥೆಗಳು ಓದುಗರನ್ನು ಸೆಳೆಯುತ್ತಲೇ ಇದೆ. ಅತ್ಯುತ್ತಮವಾದ ಕಥೆಗಳನ್ನು ಆಯ್ದು ಸಂಗ್ರಹಿಸಿ, ನಿರೂಪಿಸಿದ್ದು ಇಲ್ಲಿಯ ವೈಶಿಷ್ಟ್ಯ.
ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...
READ MORE