ಲೇಖಕ ಪ. ರಾಮಕೃಷ್ಣ ಶಾಸ್ತ್ರಿ ಅವರ ಕಥಾಮಾಲೆ ಕೃತಿ ʻಪುಟಾಣಿ ಕಥೆಗಳುʼ. ಪುಸ್ತಕವು ಕಿರಿಯರಿಗಾಗಿಯೇ ಹಲವಾರು ಕಥೆಗಳನ್ನು ಹೇಳುತ್ತದೆ. “ಹಲವಾರು ಕಡೆ ಮನಸ್ಸನ್ನು ಹರಿಬಿಡುವಂಥ ವಯಸ್ಸಿನ ಮಕ್ಕಳಿಗೆ ಓದಿನ ಕಡೆ ಗಮನ ಹರಿಯುವಂತೆ ಮಾಡುವುದು ಸುಲಭದ ಮಾತೇನಲ್ಲ. ಪೋಷಕರ ಪಾತ್ರವೂ ಮುಖ್ಯ. ಮಕ್ಕಳಿಗೆ ಖುಷಿ ಕೊಡುವಂಥ ಬರವಣಿಗೆ ಮೂಲಕ ಪ್ರಸಿದ್ಧರಾದ ಪ. ರಾಮಕೃಷ್ಣ ಶಾಸ್ತ್ರಿಯವರ ಇಲ್ಲಿನ ಕಥೆಗಳು ವಿಚಾರಪೂರ್ಣವೂ, ನೀತಿಪ್ರಧಾನವೂ, ನಗು ಉಕ್ಕಿಸುವ ಹಾಸ್ಯಪ್ರಧಾನವೂ ಆಗಿವೆ. ಇಲ್ಲಿ ವಿಷಯ ವೈವಿಧ್ಯವಿದ್ದು ಒಂದು ಕಥೆಯೋದಿದರೆ ಇನ್ನೊಂದು ಹೇಗಿರಬಹುದೆಂಬ ಕುತೂಹಲ ಮೂಡಿಸುವಂಥ ಸೆಳೆತವಿದೆ. ಚಿಕ್ಕವಾದರೂ ಚೊಕ್ಕವಾಗಿವೆ. ಕೆಲವು ಕಡೆ ಚಿತ್ರಗಳು ಗಮನ ಸೆಳೆಯುತ್ತವೆ” ಎಂದು ಈ ಕೃತಿಯ ಪ್ರಕಾಶಕರು ಹೇಳಿದ್ದಾರೆ.
ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾಗಿರುವ ಪ. ರಾಮಕೃಷ್ಣ ಶಾಸ್ತ್ರಿಯವರು ಹುಟ್ಟಿದ್ದು1953ರ ಜುಲೈ 7ರಂದು. ಊರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು. ತಂದೆ ವೆಂಕಟರಮಣ ಶಾಸ್ತ್ರಿ, ತಾಯಿ ಗುಣವತಿ. ಪ್ರಾರಂಭಿಕ ಶಿಕ್ಷಣ ಮನೆಯಲ್ಲಿಯೇ ಕಲಿತ ಅವರು ನೇರವಾಗಿ ನಾಲ್ಕನೆ ತರಗತಿಗೆ ಸೇರ್ಪಡೆಯಾದರು ಓದಿದ್ದು ಏಳನೆಯ ತರಗತಿಯವರೆಗೆ ಮಾತ್ರ. ಪುತ್ತೂರಿನ ಬಳಿ ಕಬಕ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದ ಅವರ ಕುಟುಂಬ ಸಾಂಸಾರಿಕ ತೊಂದರೆಯಿಂದ ಮಚ್ಚಿನ ಗ್ರಾಮಕ್ಕೆ ವಲಸೆ ಹೋಗಬೇಕಾಯಿತು. ಇದರಿಂದಾಗಿ ಓದಿಗೆ ತಡೆಯುಂಟಾಗಿ ಶಾಲೆ ತೊರೆದರು. ಆನಂತರ ಅವಲಂಭಿಸಿದ್ದು ಕೃಷಿ. ‘ಹಿಮದ ಹುಡುಗಿ’, ‘ಆನೆ ಮತ್ತು ಇರುವೆ’, ‘ಚಿನ್ನದ ಸೇಬು’, ‘ಚಿನ್ನದ ಗರಿ’, ...
READ MORE