ಇಲ್ಲಿನ ಸಣ್ಣ ಸಣ್ಣ ಕತೆಗಳು ಬದುಕಿಗೆ ಮಾರ್ಗ ತೋರಿಸುವ ದಾರಿ ದೀಪಗಳಾಗಿವೆ. ‘ಯಶಸ್ಸಿನ ದಾರಿದೀಪಗಳು ’ ಕೃತಿಗೆ ಮುನ್ನುಡಿ ಬರೆದಿರುವ ಗುಂಡೂರ ಪವನ್ ಕುಮಾರ್ ಅವರು “ನಮ್ಮ ಆದರ್ಶ ಪರಂಪರೆಯ ಮೇರು ವ್ಯಕ್ತಿತ್ವಗಳ ಪರಿಚಯ ಇಂದಿನ ಮಕ್ಕಳ ಮನಸ್ಸುಗಳಿಗೆ ತಲುಪಿಸುವುದು ಸಾರ್ಥಕ ಕಾರ್ಯವನ್ನು ಲಕ್ಷ್ಮೀದೇವಿ ಕಮ್ಮಾರ್ ಅವರು ಈ ಕೃತಿಯ ಮೂಲಕ ನಿರ್ವಹಿಸಿದ್ದಾರೆ” ಎಂದು ಶ್ಲಾಘಿಸಿದ್ದಾರೆ. ‘ಏಕಲವ್ಯ, ನಚಿಕೇತ, ಬಾಲ್ಯದಲ್ಲಿ ಬಿತ್ತಿದ್ದು ಬಲಗೊಂಡು ಮುಗಿಲೆತ್ತರಕ್ಕೆ ಬೆಳೆದ ಧೃವನ ಕತೆ, ವಿದ್ಯಾರ್ಥಿ ಜೀವನಕ್ಕೆ ಸ್ಫೂರ್ತಿ ಮಾರುತಿ’ ಮುಂತಾದ ಹತ್ತು ಮೌಲ್ಯಯುತ ಮಕ್ಕಳ ಕತೆಯನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.
©2024 Book Brahma Private Limited.