‘ಭೂಮ್ತಾಯಿ ಅಜ್ಜಿ ಆದ್ಲಾ..?’ ಯುವ ಬರಹಗಾರ್ತಿ ಪಲ್ಲವಿ ಬಿ.ಎನ್ (ಎಡೆಯೂರು ಪಲ್ಲವಿ) ಅವರ ಮಕ್ಕಳ ಕಥಾ ಸಂಕಲನ. ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯ ಪಡೆದ ಕೃತಿ. ಪತ್ರಕರ್ತ, ಲೇಖಕ ಸತೀಶ್ ಚಪ್ಪರಿಕೆ ಅವರು ಬೆನ್ನುಡಿ ಬರೆದು ‘ಇಲ್ಲಿನ ಎಲ್ಲ ಕತೆಗಳಲ್ಲಿ ಪರಿಸರ ಪ್ರಜ್ಞೆ, ಮತ್ತು ಮಾನವ ಪ್ರೀತಿಯ ಹೊನಲು ಜೊತೆ-ಜೊತೆಯಾಗಿ ಹರಿದಿದೆ. ನಡು-ನಡುವೆ ನೀತಿಕಥೆಗಳು ಇದ್ದರೂ ಒಟ್ಟಾರೆ ಹೆಚ್ಚಿನೆಲ್ಲ ಕಥೆಗಳಲ್ಲಿ ಪರಿಸರದ ಬಗ್ಗೆ ಅಪಾರ ಕಾಳಜಿ ವ್ಯಕ್ತವಾಗಿದೆ. ಇಂದಿನ ವಿಷಮ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸುವುದು ತೀರಾ ಅಗತ್ಯ. ಆ ನಿಟ್ಟಿನಲ್ಲಿ ಎಡೆಯೂರು ಪಲ್ಲವಿ ಅವರ ಮೊದಲ ಮಕ್ಕಳ ಕಥಾಸಂಕಲನ ‘ಭೂಮ್ತಾಯಿ ಅಜ್ಜಿ ಆದ್ಲಾ?’ ಕೃತಿ ಮುಖ್ಯವಾಗುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಈ ಸಂಕಲನದಲ್ಲಿ ಎಂದೂ ಮುಗಿಯದ ಕಥೆ, ಮೊನಾರ್ಕ್ ಚಿಟ್ಟೆ ಮತ್ತು ಮೂರು ಅಡಕತ್ತರಿ, ಭೂಮ್ತಾಯಿ ಅಜ್ಜಿ ಆದ್ಲಾ, ಗುಬ್ಬಿ ಹಕ್ಕಿ, ಪ್ರಗತಿಯ ಜಾಣತನ, ಬಾಟಲಿ ತೂತು ಮಾಡಿದ್ದು ಯಾರು, ಹಾವನ್ನು ಸಾಯಿಸಿದ್ದು ಯಾರು, ಚಿನ್ನಜ್ಜ ಮತ್ತು ಚಂಪಾಕಲಿಯ ಪ್ರಕೃತಿ ಪ್ರೇಮ, ಗಂಗಪ್ಪ ಮತ್ತು ಚನ್ನಯ್ಯ, ಮೇಘನಾ ಮೇಡಂನ ಯುಕ್ತಿ, ಕಾಳಜಿ, ಆಗಸಕ್ಕೆ ಸೇರಿದ ಚಂದಿರ, ಹೂವನ್ನೇಕೆ ಮುಡಿಯಬಾರದು, ನಾಗರಹೊಳೆ ಅಭಯಾರಣ್ಯ, ಬೆಳ್ಳಗಿನ ಭೂತ ಮತ್ತು ಅಜ್ಜಿಯ ಕಥೆ, ಚಿಂಟಿ ಮಿಂಟಿ ಸಾಂಟಾ ವಂಡರ್ ಗೆ ಹೋಗಿದ್ದು ನಿಜನಾ, ಚಿನ್ನದ ಗರಿಯ ಕೋಳಿ ಮತ್ತು ಸಾಗರಿ, ದಿವ್ಯ ಜಲ ಮತ್ತು ಮಾಯಾ ಗನ್ನಡಿ, ಹಗಲು ಮೊದಲಾ, ಇರುಳು ಮೊದಲಾ, ನೀಲು ಬಾಲು ಮತ್ತು ರಾಣಿ ಮೀನು, ಪಾಪಿ ರಾಜ ಮತ್ತು ಸಮುದ್ರ, ಮರೆಯಾದ ಅಹಂಕಾರ, ಚಿಂಟೂವಿನ ಸಂಗೀತ ಕಛೇರಿ ಹಾಗೂ ಪೃಥ್ವಿಯ ಮಾದರಿ ಸರ್ಕಾರಿ ಪಾಠಶಾಲೆ ಎಂಬ 23 ಕತೆಗಳಿವೆ.
©2024 Book Brahma Private Limited.