ಕಲ್ಲು ಸಕ್ಕರೆ ಮಾಲೆ ಸಂಧ್ಯಾ ಮಾಮಿ ಹೇಳಿದ ಕಥೆಗಳ ಪೈಕಿ ಚೌಚೌ ಕಥೆಗಳು ಒಂದು. ಇದೇ ಲೇಖಕಿಯ ಸಚಿತ್ರ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಿವೆ. ಮಕ್ಕಳ ಓದಿನ ಆಸಕ್ತಿಗೆ ಪೋಷಕವಾಗುವುದು ಈ ಪುಸ್ತಕಗಳ ಮುಖ್ಯ ಉದ್ದೇಶ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ.ಕಲ್ಲುಸಕ್ಕರೆಯಾಗಿ ಅವು ಅನಂತವಾದವು. ಕಥೆಗಳ್ಯಾವುವೂ ನನ್ನದಲ್ಲ, ಕೇಳಿದ, ಓದಿದ ಕಥೆಗಳಿವು ಎಂದು ಲೇಖಕಿ ಸಂಧ್ಯಾ ಎಸ್.ಪೈ ಹೇಳಿದ್ದಾರೆ.
ಮಣಿಪಾಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ವಿಭಾಗದ ಗೌರವ ನಿರ್ದೇಶಕಿಯಾಗಿರುವ ಸಂಧ್ಯಾ ಎಸ್. ಪೈ ಅವರು ಪತ್ರಿಕೋದ್ಯಮಿ, ಲೇಖಕಿ. ತರಂಗ ವಾರಪತ್ರಿಕೆ ಸೇರಿದಂತೆ ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ನಾಲ್ಕು ಪತ್ರಿಕೆಗಳಿಗೆ ಸಂಪಾದಕಿ ಆಗಿದ್ದಾರೆ. ಸಂಧ್ಯಾ ಅವರು ಜನಿಸಿದ್ದು ಚಿಕ್ಕಮಗಳೂರಿನಲ್ಲಿ 1947ರ ಫೆಬ್ರುವರಿ 26ರಂದು. ತಂದೆ ಬಿ. ನಾರಾಯಣ ಬಾಳಿಗಾ ಹಾಗೂ ತಾಯಿ ಸುಮಿತ್ರಾದೇವಿ. ಇದು ಈಜಿಪ್ಟ್ ಇದು ಇಸ್ರೇಲ್ (ಪ್ರವಾಸ ಕಥನ), ಸಂಪಾದಕೀಯ ಅಂಕಣಗಳಾದ ’ಪ್ರಿಯ ಓದುಗರೇ’ ಬರಹಗಳ 10 ಸಂಪುಟಗಳು ಪ್ರಕಟವಾಗಿವೆ. ಕೊಂಕಣಿ ರಾಂದಪ (ಕನ್ನಡ, ಇಂಗ್ಲಿಷ್ ಆವೃತ್ತಿ). ಯಕ್ಷಪ್ರಶ್ನೆ, ಪರಂಪರೆಯ ಪುಟಗಳಿಂದ (ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳ ...
READ MORE