ಮಕ್ಕಳೇನು ಸಣ್ಣವರಲ್ಲ

Author : ಗುಂಡುರಾವ್ ದೇಸಾಯಿ

Pages 96

₹ 80.00




Year of Publication: 2022
Published by: ಕೀರ್ತೀ ಪ್ರಕಾಶನ ಮಸ್ಕಿ
Address: ಗವಿಶರಣಂ ಶಾಲೆಯ ಹತ್ತಿರ ಮಸ್ಕಿ-584124 ಜಿ:ರಾಯಚೂರು
Phone: 9740346338

Synopsys

ಲೇಖಕ ಗುಂಡುರಾವ್ ದೇಸಾಯಿಯವರ ಮಕ್ಕಳ ಕಥೆಗಳ ಸಂಕಲನ ಮಕ್ಕಳೇನು ಸಣ್ಣವರಲ್ಲ . ಕೃತಿಯ ಮುನ್ನುಡಿಯಲ್ಲಿ ಆನಂದ ಪಾಟೀಲ ಅವರು  ಮುನ್ನುಡಿಯನ್ನು ಬರೆದಿದ್ದಾರೆ. ಕನ್ನಡದಲ್ಲಿ ಹಾಸ್ಯವನ್ನೇ ವಿಶೇಷವಾಗಿ ಮಕ್ಕಳಿಗೆ ಅಂತ ಬಂದುದಿಲ್ಲ. ಕೆಲವರೆಲ್ಲ ಅಷ್ಟಿಷ್ಟು ಬರೆದುದಿದೆ, ಆದರೆ ಗುಂಡುರಾವ್ ಅಂಥವರು ಸಿಕ್ಕರೆ ಇನ್ನಷ್ಟು ವಿಶೇಷದ್ದು ಸಿಗುತ್ತದೆ ಎನ್ನುವುದು ನನ್ನ ಹವಣಿಕೆ. ಹವಣಿಕೆ ಏನುಬಂತು, ಇವರ ಕತೆಗಳನ್ನು ಓದುತ್ತ ನಾನು ನನ್ನೊಳಗೇ ನಕ್ಕುನಕ್ಕು ಹಾಕಿದ್ದೇನೆ ತಡೆಯಲಾರದೆ ! ಮುಸಿಮುಸಿ ನಕ್ಕಿದ್ದೇನೆ, ತುಟಿಬಿಚ್ಚಿ ನಕ್ಕಿದ್ದೇನೆ, ಅಯ್ಯೊ ಅಂತ ದೊಡ್ಡದಾಗಿಯೂ ನಕ್ಕುಬಿಟ್ಟಿದ್ದೇನೆ. ಅಂಥ ಖಾಸಾ ಖಾಸಾ ಹಳ್ಳಿಯ ಘಮಲು ಇಲ್ಲಿ ತುಂಬಿದೆ. ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಎಲ್ಲ ರುಚಿ ಇರಬೇಕು. ಅದು ಬಡವೇ ಆಗಿದೆ. ಈಗ ಒಂದಿಷ್ಟೆಲ್ಲ ಹೊಸನೀರು ಬರುತ್ತಿದೆ ಎಂದರೂ ಅದು ತೀರ ಕಡಿಮೆ. ದೊಡ್ಡವರ ಸಾಹಿತ್ಯ ಎಷ್ಟೊಂದು ಶ್ರೀಮಂತವಾಗಿದೆಯೋ ಅದಕ್ಕೆ ಹೋಲಿಸಿದರೆ ಮಕ್ಕಳಿಗಾಗಿ ಅಂತ ಬಂದಿರುವುದು ಸೊರಗಿದ ಬಾಡಿದ ಸೊಪ್ಪಿನಂತೆ. ನಮ್ಮ ಸಾಹಿತ್ಯ ಲೋಕಕ್ಕೆ ಮಕ್ಕಳ ಸಾಹಿತ್ಯ ಎಂದರೆ ಅದೇಕೋ ಮೂಗು ಮುರಿಯುವುದೇ ಆಗಿದೆ. ಏನೇ ಸಂದರ್ಭವಶಾತ್ ಮಾತಿಗೆ ಬಂದರೂ ಅದೆಲ್ಲ ಸಮಯ ದಾಟಿಸಲು ಅಷ್ಟೇ. ಹಾಗಾಗಿ ಮಕ್ಕಳಿಗಾಗಿ ಬರೆಯಬೇಕೆಂಬ ಅಭಿಲಾಷೆಯುಳ್ಳವರಿಗೂ ಕೀಳರಿಮೆ ಬೆಳೆಯುವ ವಾತಾವರಣ ತುಂಬಿಬಿಟ್ಟಿದೆ. ಅದೇನೋ ಗಟ್ಟಿಯೆದೆ ಇರುವವರೇ ತಮ್ಮದೇ ಅದೇನೋ ತಮಗೆ ಬೇಕೇಬೇಕೆಂಬ ಹಟದಿಂದ ಬರೆಯುತ್ತಿರುವವರು. ಮೊದಲನೆಯ ಕತೆಯಲ್ಲಿಯೇ, ಪ್ರಾರಂಭದ ಸಾಲುಗಳಲ್ಲಿಯೇ ‘ಹೊ.ಹೋ...ತಾವು ಏನೊ ಚಿವುಟಿದ್ದು... ಸಾಹೇಬರೆ ಎದ್ದೇಳಿ?’ ಅಂತ ಮಾಸ್ತರು ಚಿವುಟಿದ ಮಲ್ಲಯ್ಯ ಅನ್ನುವ ಹುಡುಗನನ್ನು ನಿಲ್ಲಿಸಿದಾಗ ಆ ಮಲ್ಲಯ್ಯನೆಂಬ ಭೂಪ ಕೊಡುವ ಉತ್ತರ ‘ಸರ್ ನಾನು ಚಿವುಟಿಲ್ಲರಿ ಸೀಸಕಡ್ಡಿ ಚುಚ್ಚಿತ್ರಿ... ನಾನು ಹಿಡಕೊಂಡಿದ್ದೆ ಅಷ್ಟೆ’. ಅನ್ನವನ್ನು ಅಗುಳಿನಿಂದ ಖಂಡಿತ ತಿಳಿಯಬಹುದು ಎನ್ನುವ ಹಾಗೆ ಈ ಪುಟ್ಟ ಪ್ರಸಂಗವೇ ಇಲ್ಲಿನ ಒಟ್ಟು ಬರಹದ ಚೆಹರೆಯನ್ನು ಹೇಳುತ್ತದೆ, ಕಲಿಸುವ ಶಿಕ್ಷಕರನ್ನೇ ದಿಗಿಲುಗೊಳಿಸುವ, ತಲೆ ಕೆಡಿಸುವಂತೆ ಮಾಡುವ, ನಿರೀಕ್ಷೆಗಿಂತಲೂ ಸಾಕಷ್ಟು ಮುಂದೇ ಹೋಗಿರುವ ಹುಡುಗರೇ ಇಲ್ಲಿನ ಅನೇಕ ಕತೆಗಳಲ್ಲಿ ಭೇಟಿಯಾಗುತ್ತಾರೆ. ಅವರೆಲ್ಲ ಖರೇಖರೆ ವಾಸ್ತವದಲ್ಲಿಯೇ ಬದುಕುತ್ತ, ತಮ್ಮ ಸುತ್ತಲಿನದನ್ನೆಲ್ಲ ತಮ್ಮದೇ ಕಣ್ಣುಗಳೆಂಬ ದುರ್ಬೀನುಗಳಿಂದ ವಿವರವಾಗಿಯೇ ನೋಡುತ್ತಿರುವ ಹಳ್ಳಿವಾಡ ಭಾರತವನ್ನು ಪ್ರತಿನಿಧಿಸುವ ಹುಡುಗರು. ಇವರೇ ಈ ಕತೆಗಳ ಹಿರೋ ಪಾತ್ರಧಾರಿಗಳು. ಇಂಥವರ ನಡುವೆ ಶಿಕ್ಷಕರು ಕೇವಲ ಪುಸ್ತಕದ ಪುಟಗಳ ಜ್ಞಾನವನ್ನು ತಮ್ಮ ಬ್ಲ್ಯಾಕ್ ಬೋರ್ಡ್ ಖಡುವಿನಿಂದ ತಲುಪಿಸಿ ವಿರಮಿಸುವಂತಿಲ್ಲವೇ ಇಲ್ಲ. ಯಾಕೆಂದರೆ ಈ ಹುಡುಗರೆಲ್ಲ ಆಗಲೇ ಮುಂದೆ ಸಾಗಿದವರು. ಹೌದು, ಮಕ್ಕಳು ಎಂದೊಡನೆ ಅದೊಂದು ಹೋಮೋಜೀನಿಯಸ್ ಸಮೂಹವಲ್ಲ. ನಮ್ಮ ನಡುವೆ ನಾನಾ ಬಗೆಯ, ವಿಭಿನ್ನ ಪರಿಸರದ, ಬಡತನ ಸಿರಿವಂತಿಕೆಯ, ಅನುಕೂಲದ, ಅನಾನೂಕೂಲದ, ದುಡಿಯುವ, ಮನೆಯ ಜವಾಬುದಾರಿ ಹೊತ್ತಿರುವ, ಸ್ಲಮ್ಮುಗಳಲ್ಲಿ ದಿನಕಳೆಯುವ, ಅಲೆಮಾರಿಯಾಗಿ ಅಡ್ಡಾಡಿಕೊಂಡೇ ಇರುವ ಎಷ್ಟೊಂದು ಬಗೆಬಗೆಯ ಮಕ್ಕಳಿದ್ದಾರೆ. ನಮ್ಮ ಇದುವರೆಗಿನ ಮಕ್ಕಳ ಸಾಹಿತ್ಯ ರಚಿತವಾಗಿರುವುದು ಬಹಳಷ್ಟು ಸಲ ಮಧ್ಯಮವರ್ಗದ, ಶಾಲೆಯ ಗೋಡೆಯಲ್ಲಿನ ಮಿತಿಗಳಲ್ಲಿಯೇ ಮರ್ಯಾದೆಯ ತಡೆಗೋಡೆಗಳನ್ನ ಹೆಚ್ಚೇ ಕಲ್ಪಿಸಿಕೊಳ್ಳುವ ಮಕ್ಕಳನ್ನ ತಲುಪಲೆಂದು. ಈಚಿನ ದಿನಗಳಲ್ಲಿಯೇ ಒಂದಿಷ್ಟೆಲ್ಲ ವಿಭಿನ್ನವಾದ ಸಮಾಜದ ಮಗ್ಗಲುಗಳಿಂದ ಅನುಭವ ದ್ರವ್ಯ ಹರಿದುಬರುತ್ತಿದೆ. ಗುಂಡುರಾವ್ ತಮ್ಮ ಶಾಲಾ ಕೋಣೆಯಲ್ಲಿ ಕಾಣುವ, ಕುಟುಂಬದ ನಡುವಿನಲ್ಲಿಯೇ ಕಾಣುವ ಮಕ್ಕಳನ್ನೇ ಕತೆಯ ಪಾತ್ರಗಳಾಗಿ ಇಟ್ಟುಕೊಂಡರೂ ಸುತ್ತಲಿನ ವಾಸ್ತವಕ್ಕೆ ಸಖತ್ತಾಗಿ ತೆರೆದುಕೊಂಡಿರುವ ಮಕ್ಕಳ ಲೋಕವನ್ನೇ ಮುಂದಿರಸಲು ನೋಡಿರುವುದು. ಅವರು ‘ಮಕ್ಕಳೇನು ಸಣ್ಣವರಲ್ಲ’ ಎಂದು ಟೈಟಲ್ ಇಟ್ಟುಕೊಂಡುದು ಕನ್ನಡದ ಸಂದರ್ಭದಲ್ಲಿ ಅವರಿಗೆ ಅಗತ್ಯವಾಗಿ ಕಂಡುದೂ ಸಹಜವಾಗಿಯೇ ಇದೆ. ಸರಿ ಸುಮಾರು 10 ವರ್ಷದವರೆಗಿನ ಮಕ್ಕಳನ್ನೇ ಕನ್ನಡದ ಮಕ್ಕಳ ಸಾಹಿತ್ಯ ತನ್ನ ಓದುಗರನ್ನಾಗಿ ಭಾವಿಸಿಕೊಳ್ಳುತ್ತ ಬಂದುದಾಗಿದೆ. ನಮ್ಮ ನವೋದಯದವರು, ನಂತರದ ದೊಡ್ಡ ಶಿಕ್ಷಕ ಸಮುದಾಯದವರು ಇಂಥದನ್ನೇ ಮುಂದುರಿಸಿದರು. ಇವತ್ತಿಗೂ ನಮ್ಮ ಸಾಹಿತ್ಯಿಕ ವಲಯದ ಅನೇಕ ಹಿರಿಯರು ತುಸು ಗಂಭೀರವಾದ ವಿಷಯ ಕಾಣಿಸಿಕೊಂಡರೆ ಹುಬ್ಬೇರಿಸಿಬಿಡುತ್ತಾರೆ. ಗುಂಡುರಾವ್ ಅವರ ಎಲ್ಲ ಕತೆಗಳೂ ಹೀಗೆ ಹುಬ್ಬೇರಿಸುವ ಪ್ರಸಂಗಗಳನ್ನೇ ವಸ್ತುವಾಗಿಸಿಕೊಂಡಿವೆ. ವಾಸ್ತವವಾಗಿ ಅವರ ಮುಂದಿರುವ ಮಕ್ಕಳೇ ಅವರು. ದಿನವೂ ನೋಡುತ್ತಿರುವ, ಅವರೊಡನೆಯೇ ಶಿಕ್ಷಣದ, ಅದರಾಚೆಯ ಮಕ್ಕಳ ಲೋಕವನ್ನ ಅವರು ಸೃಷ್ಟಿಸಿಕೊಳ್ಳುತ್ತಿರುವುದು ಎಂದಿದ್ದಾರೆ.

About the Author

ಗುಂಡುರಾವ್ ದೇಸಾಯಿ

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ಕೃತಿಗಳು: ನಾನೇ ಸತ್ತಾಗ-(ಹಾಸ್ಯ ಬರಹ-2004), ಮುತ್ತಿನ ಹನಿ(ಸಂಪಾದಿತ ಕಾವ್ಯ-2009), ಸಿಟಿಯೊಳಗೊಂದು ಮನೆಯ ಮಾಡಿ-(ಲಲಿತ ಪ್ರಬಂಧ-2010), ಡಯಟಿಂಗ್ ಪುರಾಣ-(ಹಾಸ್ಯ ಬರಹ-2012), ಸಾದ್ವಿ ಶಿರೊಮಣಿ ತುರಡಗಿ ತಿಮ್ಮಮ್ಮನವರು(ಚರಿತ್ರೆ-2012), ವೆಂಕಟೇಶ ವೈಭವ (ಸಂಪಾದನೆ-2012), ಅಶೋಕ ಸಿರಿ(8ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ನೆನಪಿನ ಸಂಚಿಕೆ-204), ಗಚ್ಚಿನಶ್ರೀ(ಮಸ್ಕಿ ಗಚ್ಚಿನ ಮಠದ ರುದ್ರದೇವರ ಪಟ್ಟಾಧಿಕಾರದ ನೆನಪಿನ ಸಾಹಿತ್ಯಿ ಸಂಚಿಕೆ-2016), ಸರ್ಜರಿಯ ಆ ಸುಖ-(ಲಲಿತ ಪ್ರಬಂಧ-2016), ವಚನ ಪ್ರಸೂನಮಾಲಾ -(ಸಂಪಾದನೆ- 2017), ಹಿತೋಪದೇಶ-(ಇತರರೊಂದಿಗೆ ಸಂಪಾದನೆ-2017), ಅಜ್ಜನ ಹಲ್ಲುಸೆಟ್ಟು(ಮಕ್ಕಳ ...

READ MORE

Related Books