ಅಮರ ಚಿತ್ರ ಕಥೆ ಮಾಲಿಕೆ (ಕನ್ನಡ)-ಕನ್ನಡಿಗರ ಗಮನ ಸೆಳೆದ ಕೃತಿ. ಮಕ್ಕಳ ಕೃತಿಯಾದರೂ ದೊಡ್ಡವರನ್ನೂ ತನ್ನತ್ತ ಸೆಳೆದಿರುವ ಆಕರ್ಷಕ ಕೃತಿ ಇದು. ಇಂತಹ ಕೃತಿಗಳನ್ನು ಓದುತ್ತಲೇ ಬೆಳೆದವರೂ ಇದ್ದಾರೆ. ಹೀಗಾಗಿ, ಕೃತಿಯ ಚಿತ್ರಗಳು ಕನ್ನಡ ಓದುಗರಿಗೆ ಹೊಸದಲ್ಲ. ಲೇಖಕ ಅನಂತ ಪೈ ಅವರು ಅಂಕಲ್ ಪೈ ಎಂದೇ ಖ್ಯಾತಿ ಪಡೆದಿದ್ದು, ಅವರು ಒಟ್ಟು 26 ಕೃತಿಗಳನ್ನು (ರಾಮಾಯಣ, ಮಹಾಭಾರತ, ಪಂಚತಂತ್ರದ ಕಥೆಗಳು, ಬೇತಾಳನ ಕಥೆಗಳು ಇತ್ಯಾದಿ) ಒಟ್ಟುಗೂಡಿಸಿ ಇಲ್ಲಿ ಓದುಗರಿಗೆ ನೀಡಲಾಗಿದೆ.
ಕುಂಭಕರ್ಣ, ಇಲಿಯ ವ್ಯಾಪಾರಿ, ಭೀಷ್ಮ , ಕೃಷ್ಣ ಮತ್ತು ಜರಾಸಂಧ, ಕಾರ್ತಿಕೇಯ, ಪಕ್ಷಿ ಕಥೆಗಳು (ಜಾತಕ ಕಥೆಗಳು), ಜಾಣ ಬೀರ್ಬಲ್, ರಾಮ, ಮಹಾಭಾರತ , ಮಾಯಾ ಮಂತ್ರ (ಜಾತಕ ಕಥೆಗಳು), ತೆನಾಲಿರಾಮ, ಕಾರುವ ಕಳ್ಳ – ಕೇಸರಿ, ಕರ್ಣ, ಗರುಡ , ಕಾಗೆಗಳು ಮತ್ತು ಗೂಬೆಗಳು (ಪಂಚತಂತ್ರ ಕಥೆಗಳು), ಬ್ರಾಹ್ಮಣನೂ , ಹೋತವೂ (ಪಂಚತಂತ್ರ ಕಥೆಗಳು), ವಾನರ ಕಥೆಗಳು (ಜಾತಕ ಕಥೆಗಳು), ಚದುರ ಬೀರಬಲ್, ಗೀತೆ , ಅರ್ಜುನನ ಕಥೆಗಳು, ಸುದಾಮ , ಗಣೇಶ , ಅಭಿಮನ್ಯು , ದುರ್ಗಾಮಾತೆಯ ಕಥೆಗಳು ಭೀಮ ಮತ್ತು ಹನುಮಂತ, ಜಿಂಕೆಯ ಕಥೆಗಳು (ಜಾತಕ ಕಥೆಗಳು) ಹೀಗೆ ಒಟ್ಟು 26 ಕಥೆಗಳ ಕೃತಿಗಳನ್ನು ಸಂಕಲಿಸಲಾಗಿದೆ.
ಅನಂತ ಪೈ ಅವರ ಪೂರ್ಣ ಹೆಸರು-ಕಾರ್ಕಳ ವೆಂಕಟ್ರಾಯ ಅನಂತ್ ಪೈ. ಕಾರ್ಕಳದಲ್ಲಿ 17-09-1929ರಂದು ಜನನ. ತಂದೆ ವೆಂಕಟ್ರಾಯ, ತಾಯಿ ಸುಶೀಲಾ. ಮಗು ಎರಡು ವರ್ಷವಿದ್ದಾಗ ತಂದೆ-ತಾಯಿ ತೀರಿಕೊಂಡರು. ಸಂಬಂಧಿಕರ ಸಹಕಾರದಲ್ಲಿ ಬೆಳೆದರು. ಮುಂಬೈನ ಮಾಹಿಮ್ ಓರಿಯೆಂಟಲ್ ಶಾಲೆಯಲ್ಲಿ ಶಿಕ್ಷಣ ನಂತರ ಮುಂಬೈ ವಿ.ವಿ.ಯಿಂದ ಕೆಮಿಕಲ್ ಟೆಕ್ನಾಲಜಿಯಲ್ಲಿ ಎರಡು ಪದವಿ ಪಡೆದರು. ಅಂಕಲ್ ಪೈ ಎಂದೇ ವಿಶ್ವಖ್ಯಾತಿ. ವ್ಯಂಗ್ಯ ಚಿತ್ರಗಳು ಅಷ್ಟೇನೂ ಹೆಸರುಮಾಡಿರದ ಕಾಲದಲ್ಲಿ 'ಅನಂತ ಪೈ'ರವರು ಮಕ್ಕಳ ಮನಸ್ಸಿಗೆ ನಾಟುವಂತೆ ಸೃಷ್ಟಿಸಿದ ಕಥಾಚಿತ್ರಗಳು, ಅವರ ಕಥೆಯನ್ನು ಹೇಳುವ ಕೌಶಲ್ಯಕ್ಕೆ ಸಾಕ್ಷಿಯಾಗಿವೆ. ಮಕ್ಕಳ ಸುಸುಪ್ತ ಚೇತನವನ್ನು ಹುರಿಗೊಳಿಸಿ ಅತ್ಯಂತ ...
READ MORE