ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರು ಮಕ್ಕಳಿಗಾಗಿ ಬರೆದ ಕಥೆಗಳ ಸಂಗ್ರಹ-ಅಜ್ಜನ ಕಥೆಗಳು. ಮಕ್ಕಳ ಸಾಹಿತ್ಯ ರಚನೆ ಸುಲಭವಲ್ಲ. ಮಕ್ಕಳ ಬೌದ್ಧಿಕ ಮಟ್ಟಕ್ಕೆ ಇಳಿದು, ಅವರ ಕಲ್ಪನಾ ಸಾಮರ್ಥ್ಯವನ್ನು ಗ್ರಹಿಸಿ, ಪದಪುಂಜಗಳನ್ನು ಬಳಸಬೇಕು. ಅದರ ಗ್ರಹಿಕೆಯು ಸಹ ಯಾವ ಅರ್ಥದಲ್ಲಿ ಆಗುತ್ತದೆ ಎಂಬುದರ ಅರಿವು ಬೇಕು. ಅಜ್ಜನಲ್ಲಿರುವ ಆಪ್ತತೆಯು ಕಥೆಗಳ ಧ್ವನಿಯಾಗಬೇಕು. ಆಗಲೇ ಮಕ್ಕಳು ಕಥೆಯೆಡೆಗೆ ಹೆಚ್ಚು ಆಸಕ್ತಿ ತೋರುತ್ತವೆ. ಈ ಎಲ್ಲ ಗುಣಗಳನ್ನು ಅತ್ಯಣಂತ ಎಚ್ಚರಿಕೆಯಿಂದ ಕಥೆ ನಿರೂಪಣೆಯಲ್ಲಿ ಅಡಕಗೊಳಿಸಿರುವ ಲೇಖಕಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.
©2024 Book Brahma Private Limited.