‘ಅರ್ಥಮಂತ್ರಿ ಮತ್ತು ಹಂದಿಗಳು’ ಲೇಖಕ ಶಾಂತಾರಾಮ ಸೋಮಯಾಜಿ ಅವರು ಮಕ್ಕಳಿಗಾಗಿ ಬರೆದ ಕೃತಿ. ಪರಸ್ಪರ ಭಿನ್ನ ವಸ್ತುವಿನ ಹನ್ನೆರಡು ಸಣ್ಣ ಕಥೆಗಳಿವೆ. ಕತೆಗಾರನಾಗಿ ತಾನು ಸಮಾಜದ ಮುಂದೆ ಕನ್ನಡಿ ಹಿಡಿಯುವವ ಎನ್ನುವ ಇವರು ತಮ್ಮ ಅನುಭವಕ್ಕೆ ಒಗ್ಗಿದ ವಿಷಯವನ್ನು ತಮ್ಮದೇ ರೀತಿಯಲ್ಲಿ, ಸರಳ ಶೈಲಿಯಲ್ಲಿ ಕತೆಯಾಗಿ ನೀಡುತ್ತಾರೆ. ಅನಗತ್ಯ ಅಬ್ಬರವಿಲ್ಲದ, ಓದುಗರನ್ನು ಗೊಂದಲದಲ್ಲಿ ಬೀಳಿಸುವುದಿಲ್ಲ.
ಶಾಂತಾರಾಮ ಸೋಮಯಾಜಿ ಅವರು ಲೇಖಕರು. ಮಕ್ಕಳ ಸಾಹಿತ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕೃತಿಗಳು: ಮೇರಿಯ ಕತೆ, ದೇವರೆಂಬ ಸುಳ್ಳು, ಧರ್ಮವೆಂಬ ದ್ವೇಷ, ಅರ್ಥಮಂತ್ರಿ ಮತ್ತು ಹಂದಿಗಳು, ದೇಶವಿದೇಶಗಳ ವಿನೋದ ಕತೆಗಳು, ಚಿಟ್ಟೆಹಾಡು ಮತ್ತು ಇರುವೆ ಮದುವೆ. ಮಿತಿ ಇರದ ಖುಷಿ ಅದು ಸೈನ್ಸ್, ಹರ್ಬರ್ಟ್ ಮತ್ತು ವಾಕಿಂಗ್ ಸ್ಟಿಕ್. ...
READ MORE