‘ಹೊಸಯುಗದ ಮಕ್ಕಳಿಗೆ ಹೊಸ ಬಗೆಯ ಕಥೆಗಳು’ ಕೃತಿಯು ಆರ್. ಪಿ. ಹೆಗಡೆ ಅವರ ಕಥಾಸಂಕಲನವಾಗಿದೆ. ಸಾಮಾನ್ಯವಾಗಿ ಮಕ್ಕಳಿಗಾಗಿ ಬರೆದ ಕತೆಗಳು ಅಜ್ಜಿ ಕತೆಗಳೋ, ಜನಪದ ಕತೆಗಳೋ, ರಾಜ-ರಾಣಿ, ರಾಜಕುಮಾರಿ, ರಾಜಕುಮಾರರ ಕತೆಗಳೊ ಆಗಿರುತ್ತವೆ. ಆದರೆ ಈ ಕೃತಿಯು ಆಧುನಿಕ ಯುಗದ ಕತೆಗಳು. ಈ ಕೃತಿಯನ್ನು ಓದಿದಾಗ ಇಂದಿನ ಕಾಲದಲ್ಲಿ ಹೇಗೆ ಬದುಕಬೇಕು, ನಮ್ಮ ಬದುಕಿನಲ್ಲಿ ಯಾವುದಕ್ಕೆಲ್ಲ ಸ್ಥಾನವಿರಬೇಕು ಎಂಬ ಚಿಂತನೆಗೆ ಇಲ್ಲಿನ ಕತೆಗಳು ಹಚ್ಚುತ್ತವೆ. ಒಂದೊಂದೂ ಕತೆಯ ಮೂಲ ತಿರುಳಿಗೆ ಹೊಂದುವ ಸುಭಾಷಿತವೊಂದನ್ನು ಲೇಖಕರು ಕೆಳಗಡೆ ಕೊಟ್ಟಿದ್ದಾರೆ.
©2024 Book Brahma Private Limited.