ಲೇಖಕ ಸಂಪಟೂರು ವಿಶ್ವನಾಥ್ ಅವರು ಬರೆದ ಮಕ್ಕಳ ಸಾಹಿತ್ಯ ಕೃತಿ ʻನೀತಿಗೊಂದು ಕಥೆʼ. ಪುಸ್ತಕದಲ್ಲಿ ಒಟ್ಟು 82 ಕತೆಗಳನ್ನು ಹೇಳಲಾಗಿದೆ. ಆದರೆ ಅವುಗಳು ಮಕ್ಕಳಿಗೆ ನೀತಿಯನ್ನು ನೇರವಾಗಿ ಹೇಳಲು ಮುಂದಾಗದೆ ಕಾಲ್ಪನಿಕ ಕಥೆ ಹಾಗೂ ಸ್ವಾರಸ್ಯಕರವಾದ ಘಟನೆಗಳನ್ನು ಹೇಳುವ ಮೂಲಕ ಮಕ್ಕಳಿಗೆ ಕಥೆಯಿಂದ ಪಾಠವನ್ನು ಹೇಳಲಾಗಿದೆ. ಇಲ್ಲಿರುವ ಕಥೆಗಳು ದೇಶ ವಿದೇಶದ ಜಾನಪದಗಳಿಂದ ಆರಿಸಲ್ಪಟ್ಟವುಗಳಾಗಿವೆ. ಮಕ್ಕಳ ಅರಿವಿಗೂ, ಜ್ಞಾನಕ್ಕೂ ನೆರವಾಗುವ ಇದು ಉತ್ತಮವಾದ ಪುಸ್ತಕಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗಲಾರದು.
©2024 Book Brahma Private Limited.