ಲೇಖಕ ಶಾಂತಾರಾಮ ಸೋಮಯಾಜಿ ಅವರು ಮಕ್ಕಳಿಗಾಗಿ ಬರೆದ ಕಥೆಗಳ ಸಂಕಲನ-ಚಿಟ್ಟೆ ಹಾಡು ಮತ್ತು ಇರುವೆ ಮದುವೆ. ಅತ್ಯಂತ ಸರಳ ಭಾಷೆಯಲ್ಲಿ ಮಕ್ಕಳಿಗೆ ತಿಳಿಯುವ ಭಾಷೆಯಲ್ಲಿ ಕಾಲ್ಪನಿಕ ಸೌಂದರ್ಯದ ಈ ಕಥೆಗಳು ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿವೆ. ಈ ಕೃತಿಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ‘ಮಕ್ಕಳ ಚಂದಿರ‘ ಪ್ರಶಸ್ತಿ( 2009-10) ಲಭಿಸಿದೆ. ನವಕರ್ನಾಟಕ ಪ್ರಕಾಶನದ ಕಿರಿಯರ ಕಥಾ ಮಾಲೆಯಡಿ ಈ ಕೃತಿ ಪ್ರಕಟಗೊಂಡಿದೆ.
ಶಾಂತಾರಾಮ ಸೋಮಯಾಜಿ ಅವರು ಲೇಖಕರು. ಮಕ್ಕಳ ಸಾಹಿತ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕೃತಿಗಳು: ಮೇರಿಯ ಕತೆ, ದೇವರೆಂಬ ಸುಳ್ಳು, ಧರ್ಮವೆಂಬ ದ್ವೇಷ, ಅರ್ಥಮಂತ್ರಿ ಮತ್ತು ಹಂದಿಗಳು, ದೇಶವಿದೇಶಗಳ ವಿನೋದ ಕತೆಗಳು, ಚಿಟ್ಟೆಹಾಡು ಮತ್ತು ಇರುವೆ ಮದುವೆ. ಮಿತಿ ಇರದ ಖುಷಿ ಅದು ಸೈನ್ಸ್, ಹರ್ಬರ್ಟ್ ಮತ್ತು ವಾಕಿಂಗ್ ಸ್ಟಿಕ್. ...
READ MORE