‘ಜೀಮೂತವಾಹನ’ ಮಕ್ಕಳಿಗಾಗಿ ಮತ್ತೊಮ್ಮೆ ಹೇಳಿದ ಕಥೆ ಕೃತಿಯು ಸು. ರುದ್ರಮೂರ್ತಿ ಶಾಸ್ತ್ರಿ ಅವರ ಮಕ್ಕಳ ಕಥಾಸಂಕಲನವಾಗಿದೆ. ಪರೋಪಕ್ಕಾರಕ್ಕಾಗಿ ತನ್ನ ದೇಹವನ್ನೇ ಸತೋಷದಿಂದ ಅರ್ಪಿಸಿದ ‘ಜೀಮೂತವಾಹನ’ ಕತೆ ಹೃದಯ ಮಿಡಿಯುವಂಥದ್ದು. ಈ ಕಥೆಯು ಕ್ಷೇಮೇಂದ್ರನ ‘ಕಥಾಸರಿತ್ಸಾಗರ’ ಕೃತಿಯಲ್ಲೂ ಬರುತ್ತದೆ. ಅಲ್ಲಿ ಬೇತಾಳ ತ್ರಿವಿಕ್ರಮ ರಾಜನಿಗೆ ಈ ಕತೆಯನ್ನು ಹೇಳುತ್ತಾನೆ. ವಿದ್ಯಾಧರ ರಾಜನಾಗುವ ಜೀಮೂತವಾಹನ ತನ್ನ ತ್ಯಾಗ ಗುಣದಿಂದಲೇ ಸರ್ವಜನಪ್ರಿಯನಾಗುತ್ತಾನೆ. ಈ ಕಥೆಯಿಂದ ಪರೋಪಕಾರವೆಂಬುದು ಯಾವುದೇ ವ್ಯಕ್ತಿಯ ಮೂಲ ಗುಣವಾಗಬೇಕೆಂದು ಅರ್ಥ ಮಾಡಿಕೊಳ್ಳಬಹುದು. ಮಕ್ಕಳ ಹೃದಯ ಸಂಸ್ಕಾರ ಮಾಡಿ ಸದಾಚಾರ, ಲೋಕೋಪಕಾರಗಳನ್ನು ಕಲಿಸಲು ಈ ಕಥೆ ನೆರವಾಗುತ್ತದೆ.
©2025 Book Brahma Private Limited.