ವರ್ತಮಾನದಲ್ಲಿ ಮಕ್ಕಳು ಆಧುನಿಕತೆ ಅತಿ ವೇಗವಾಗಿ ತೆರೆದುಕೊಳ್ಳುತ್ತಿದ್ದಾರೆ. ಆದರೆ ಅವರಿಗಾಗಿ ಕತೆ ಹೆಣೆಯುವವರು ಇನ್ನೂ 80ರ ದಶಕದಲ್ಲೇ ಇದ್ದಾರೆ. ಇದು ಮಕ್ಕಳ ಕತೆಗಾರರು ಮತ್ತು ಓದುಗ ಮಕ್ಕಳ ನಡುವೆ ಅಂತರಗಳನ್ನು ಬೆಳೆಸುತ್ತಿವೆ. ಇಂದು ಏಳನೆ ವಯಸ್ಸಿನಲ್ಲೇ ಮಕ್ಕಳು ಕಂಪ್ಯೂಟರ್, ಮೊಬೈಲ್ ಜಗತ್ತಿನಲ್ಲಿ ಕಳೆದುಹೋಗುತ್ತಿದ್ದಾರೆ. ಅವರನ್ನು ಅಲ್ಲಿಂದ ಎಳೆದು, ಪುಸ್ತಕದ ಕಡೆಗೆ ಒಯ್ಯಬೇಕಾದರೆ ಅವರನ್ನು ತಟ್ಟುವ, ಅವರ ಮನಸ್ಥಿತಿಗೆ ದಕ್ಕುವ ಕತೆಗಳನ್ನು ಹೆಣೆಯಬೇಕಾಗಿದೆ. ಮಕ್ಕಳನ್ನು ಸುತ್ತುವರಿದಿರುವ ಆಧುನಿಕ ತಂತ್ರಜ್ಞಾನಗಳನ್ನು ವಸ್ತುವಾಗಿಟ್ಟು ಹೊಸ ಹೊಸ ಪ್ರಯೋಗಗಳು ಬರಬೇಕಾಗಿದೆ. ಆದರೆ ಮಕ್ಕಳ ಬರಹಗಾರರ ಕೊರತೆಯೇ ಧಾರಾಳವಾಗಿರುವಾಗ ಹೊಸ ಪ್ರಯೋಗಗಳನ್ನು ನಿರೀಕ್ಷಿಸುವುದು - ದುಬಾರಿಯೇ ಸರಿ. 'ಸಾಧನೆ' ಗಣೇಶ ಪಿ. ನಾಡೋರ ಅವರು ಬರೆದಿರುವ ಮಕ್ಕಳ ಕಥೆಗಳ ಗುಚ್ಛ. ಮಾಮೂಲಿ ಕಥಾ ನಿರೂಪಣೆಗಿಂತ ಇದು ಒಂದಿಷ್ಟು ವಿಭಿನ್ನವಾಗಿದ್ದು ವಾಸ್ತವ ಮಾದರಿಯ ಈ ಕಥಾಗುಚ್ಚ ಏಳು ಕಥೆಗಳನ್ನು ಹೊಂದಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಹುಟ್ಟಿದ್ದು: 23 ಡಿಸೆಂಬರ್ 1969. ತಂದೆ ಆರ್. ಪಲವೇಸಮುತ್ತು ನಾಡಾರ್ ತಮಿಳುನಾಡಿನ ಚೆಟ್ಟಿಕುಳಂ ಮೂಲದವರು. ತಾಯಿ ಮಹಾದೇವಿ ಹರಿಕಂತ್ರ ನಾಡಾರ್ ಗೋಕರ್ಣ ಸಮೀಪದ ತೊರೆಗಜನಿಯವರು. ಇಲ್ಲಿಯವರೆಗೆ ಮಕ್ಕಳಿಗಾಗಿ 15 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 'ಬೆಳ್ಳಕ್ಕಿ ಮತ್ತು ಬುಲ್ ಬುಲ್', 'ನೆಗೆತ', 'ಕರಿಮುಖ' 'ಆಟ' ಪ್ರಮುಖ ಮಕ್ಕಳ ಸಾಹಿತ್ಯ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಪ್ರಶಸ್ತಿ, ಸಂಧ್ಯಾ ಸಾಹಿತ್ಯ ವೇದಿಕೆಯ ಮೇವುಂಡಿ ಮಲ್ಲಾರಿ ವಿಶೇಷ ಪುರಸ್ಕಾರ, ಬಾಲವಿಕಾಸ ಅಕಾಡೆಮಿ ಪ್ರಶಸ್ತಿ ಸಂದಿವೆ. ಜೀವನೋಪಾಯ ಕ್ಕಾಗಿ ಹೈದರಾಬಾದಿನ ...
READ MORE