ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರು ಸಂಪಾದಿಸಿದ ಒಟ್ಟು 101 ಪಂಚತಂತ್ರದ ಕಥೆಗಳನ್ನು ಸಂಕಲಿಸಲಾಗಿದೆ. ಪಂಚತಂತ್ರದ ಕಥೆಗಳು ಭಾರತೀಯ ಸಂಸ್ಕೃತಿ-ವಿಕಾಸದ ಹಾದಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದು, ಇವುಗಳ ಮೂಲಕ ಮನುಷ್ಯನ ವಿಕಾಸ ಆಗಬೇಕು. ತಪ್ಪಿದರೆ, ಮನುಷ್ಯ ಅಡ್ಡದಾರಿ ಹಿಡಿಯುತ್ತಾನೆ. ಅಥವಾ, ಬದುಕಿನ ಸೂಕ್ಷ್ಮತೆ ಅಥವಾ ಜಡತ್ವವನ್ನು ತಿಳಿಯಲು ಸಾಧ್ಯವಾಗದು. ಆಗ ಬದುಕಿನಲ್ಲಿ ನಿರಾಶೆ-ಹತಾಶೆ ಕಾಡುತ್ತವೆ. ಮನುಷ್ಯನ ಸ್ವಭಾವವನ್ನು ತಿಳಿಯಲೂ ಪಂಚತಂತ್ರ ಕಥೆಗಳು ಪೂರಕವಾಗಿವೆ. ನ್ಯಾಯ ನಿರ್ಣಯ, ಹಿರಿ-ಕಿರಿಯರನ್ನು ಗೌರವಿಸುವುದು, ತರ್ಕಗಳ ಸ್ವರೂಪಗಳನ್ನು ತಿಳಿಯಬಹುದು. ಹೀಗೆ ವಸ್ತು ವೈವಿಧ್ಯತೆಯ ಕಥೆಗಳನ್ನು ಒಳಗೊಂಡ ಕೃತಿ ಇದು.
ಜಿ.ಎಂ. ಕೃಷ್ಣಮೂರ್ತಿ ಅವರು ಹಿರಿಯ ಲೇಖಕರು, ಅನುವಾದಕರು ಹಾಗೂ ವಿಮರ್ಶಕರು ಆಗಿದ್ದಾರೆ. ಮಹಾಭಾರತದ ಪ್ರಸಿದ್ಧ ಪಾತ್ರಗಳಾದ, ಪಿತಾಮಹ ಭೀಷ್ಮ, ಬಲ ಭೀಮಸೇನ, ಛಲಗಾರ ದುರ್‍ಯೋಧನ, ವೀರ ಅರ್ಜುನ, ಪಾಂಡವ ಪಟ್ಟಮಹಿಷಿ ದ್ರೌಪದಿ, ದಾನಶೂರ ಕರ್ಣ, ಸೂತ್ರಧಾರ ಶ್ರೀ ಕೃಷ್ಣ, ಶೋಕತಪ್ತ ತಾಯಿಕುಂತಿ, ಕುರುಡುದೊರೆ ಧೃತರಾಷ್ಟ್ರ, ಹಿರಿಯಪಾಂಡವ ಧರ್ಮರಾಯರ ಕುರಿತು ಸಾಹಿತ್ಯವನ್ನು ರಚಿಸಿದ್ದಾರೆ. ವಿಜ್ಞಾನ ವಿಚಾರಗಳ ಕುರಿತು ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದಾರೆ. ಕೃತಿಗಳು: ಸ್ವಂತ ಉದ್ಯಮ ಆರಂಭಿಸುವುದು ಹೇಗೆ? ಭಗವಾನ ಬುದ್ಧ, ವಿಜ್ಞಾನ ವಿಶ್ವಕೋಶ, ಮಕ್ಕಳ ವಿಶ್ವ ಜ್ಞಾನ ಕೋಶ (ಸರಣಿಗಳು), ಜನಪದ ಸಂಸ್ಕೃತಿಯ ಮಹಾ ...
READ MORE