ವೃತ್ತಿಯಲ್ಲಿ ವೈದ್ಯರಾದರೂ, ಪ್ರವೃತ್ತಿಯಲ್ಲಿ ಲೇಖಕಿಯಾಗಿರುವ ಡಾ.ಕೆ.ಎಸ್.ಚೈತ್ರಾ ಅವರ ಮಕ್ಕಳ ಕಥಾಸಂಕಲನ ಜೋ ಜೋ..ಜೋಕಾಲಿ!. ಜಾನಪದ ಲೋಕದಲ್ಲೊಂದು ಸುತ್ತು ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ಇಲ್ಲಿ ಮೂವತ್ತೆಂಟು ಪುಟ್ಟ ಪುಟ್ಟ ಕತೆಗಳಿವೆ. ಒಂದೊ0ದು ಕತೆಯೂ ಒಂದೊ0ದು ದೇಶದ್ದು, ವಿಭಿನ್ನವಾದ ಪರಿಸರದಿಂದ ಆಯ್ದುಕೊಂಡುದು. ಹಾಗಾಗಿ ಇವು ಕೇವಲ ಕತೆಗಳಾಗದೆ ನಾನಾ ಬಗೆಯ ಜೀವನ ವಿಧಾನಗಳ ಹೊಳಹುಗಳನ್ನು ಕತೆಯ ಹಂಬಲದಲ್ಲಿ ನಮಗೆ ತಲುಪಿಸುತ್ತವೆ.ಈ ಲೇಖನ ಸಂಕಲನಕ್ಕೆ ಲೇಖಕ ಆನಂದ ಪಾಟೀಲ ಅವರು ಮುನ್ನುಡಿ ಬರೆದಿದ್ದಾರೆ..
ಉದಯೋನ್ಮುಖ ಬರಹಗಾರ್ತಿಯಾದ ಚೈತ್ರಾ ಕೆ.ಎಸ್ ಅವರು ಹುಟ್ಟಿದ್ದು 1974 ಜೂನ್ 27. ವೃತ್ತಿಯಲ್ಲಿ ದಂತವೈದ್ಯೆಯಾಗಿರುವ ಅವರು ವೈದ್ಯ ಸಾಹಿತ್ಯ ರಚನೆಗಳಲ್ಲಿ ಹೆಸರಾದವರು. ವ್ಯಕ್ತಿತ್ವ ವಿಕಸನದಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ. ವಿದ್ಯಾರ್ಥಿಯಾಗಿದ್ದನಿಂದಲೆ ತಮ್ಮ ಒಲವನ್ನು ಸಾಹಿತ್ಯದೆಡೆ ಕಂಡುಕೊಂಡವರು ಸಮಗ್ರ ಸಾಧನೆಗಾಗಿ ಅಂತರರಾಷ್ಷ್ರೀಯ ಅತ್ಯತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದಾರೆ. ಆರೋಗ್ಯದ ನಗುವಿಗಾಗಿ, ಕುಶಲವೇ ಕ್ಷೇಮವೇ, ಯೋಗಕ್ಷೇಮ, ಪರಿಪೂರ್ಣ ವ್ಯಕ್ತಿತ್ವ ವ್ಯಕ್ತಿತ್ವ ವಿಕಸನ ಕೃತಿಗಳು. ಉದಯೋನ್ಮುಖ ಬರಹಗಾರ ಪ್ರಶಸ್ತಿ, 'ಕಥಾರಂಗಂ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತರರಾಷ್ಟ್ರೀಯ ಮಹಿಳಾ ವರ್ಷದ ದತ್ತಿನಿಧಿ ಬಹುಮಾನ. ಶಿವಮೊಗ್ಗೆಯ ನಾವಿಕ ಪತ್ರಿಕೆಗೆ “ಅಮೇರಿಕಾ ಪತ್ರ” ಮಹಿಳಾ ...
READ MORE