ಸ್ವಾಮಿ ವಿವೇಕಾನಂದ

Author : ಬೆ.ಗೋ. ರಮೇಶ್

Pages 96

₹ 80.00




Year of Publication: 2019
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ.70, 2ನೇ ಮುಖ್ಯರಸ್ತೆ, ಜಬ್ಬರ್ ಬ್ಲಾಕ್, ವೈಯ್ಯಾಲಿಕಾವಲ್, ಬೆಂಗಳೂರು- 560003
Phone: 23313400

Synopsys

 ‘ಸ್ವಾಮಿ ವಿವೇಕಾನಂದ’ ಸಿವಿಜಿ ಪಬ್ಲಿಕೇಷನ್ಸ್ ನ ಜೀವನ ಚರಿತ್ರೆ ಮಾಲೆಯಲ್ಲಿ ಪ್ರಕಟವಾದ ಕೃತಿ. ಸ್ವಾಮಿ ವಿವೇಕಾನಂದರನ್ನು ರಾಷ್ಟ್ರಕವಿ ಕುವೆಂಪು ಅವರು ನವ ಯುಗಾಚಾರ್ಯ ಎಂದು ಕರೆದರು. ನವ ತರುಣರಿಗೆ ವಿವೇಕಾನಂದರು ಒಬ್ಬ ಸೂರ್ತಿಜೀವವಾಗಿದ್ದರು. ಭಾರತಕ್ಕೆ ಮಂಕು ಕವಿದಿದ್ದ ದಿನಗಳಲ್ಲಿ ವಿವೇಕಾನಂದರು ಅವತರಿಸಿ ಭಾರತದ ಹಿರಿಮೆಯನ್ನು ದೇಶ ವಿದೇಶಗಳಲ್ಲಿ ಸಾರಿ ಭಾರತಕ್ಕೆ ವಿಶಿಷ್ಟ ಸ್ಥಾನವನ್ನು ತಂದುಕೊಟ್ಟರು. 1893ರಲ್ಲಿ ಚಿಕಾಗೊದಲ್ಲಿ ನಡೆದ ಭರ್ಮ ಸಂಸತ್ತಿನಲ್ಲಿ ಅವರು ಮಾಡಿದ ಭಾಷಣ ಜಗದ್ವಿಖ್ಯಾತವಾಯಿತು. ನಭೂತೋನಭವಿಷ್ಯತಿ ಎಂಬಂತೆ ಇಂದಿಗೂ ಆ ಭಾಷಣ ಮಿಲಿಯ ಮಿಲಿಯ ಜನರನ್ನು ಆಕರ್ಷಿಸುತ್ತಿದೆ.

ತಮ್ಮ ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರ ಧೈಯೋದ್ದೇಶಗಳನ್ನು ಪೂರೈಸಲು ರಾಮಕೃಷ್ಣ ಮಿಷನ್ ಸ್ಥಾಪಿಸಿದರು. ಬದುಕಿದ್ದು ಕಡಿಮೆ, ಸಾಧಿಸಿದ್ದು ಬಹಳ, ವಿವೇಕಾನಂದರ ಜೀವನ ಸಾಧನೆ ಕುರಿತು ತಿಳಿಯುವುದು ಒಂದು ಸ್ಫೂರ್ತಿದಾಯಕ ಸಂಗತಿ 'ಏಳಿ ಎದ್ದೇಳಿ! ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂದು ಯುವಕರನ್ನು ಹುರಿದುಂಬಿಸಿದವರು ವಿವೇಕಾನಂದರು. ಕಾರ್ಯ ಶೀಲರಾಗಿರಿ ಉಳಿದವು ತಾವಾಗಿಯೇ ಬರುತ್ತವೆ ಎಂದು ಉತ್ತೇಜಿಸಿದರು. ವಿವೇಕಾನಂದರಿಗೆ ಒಳ್ಳೆ ವಾಕ್‌ಶಕ್ತಿ ಇತ್ತು. ಅದೊಂದು ಅವರ ಅದ್ಭುತ ಸಾಮರ್ಥ್ಯ, ಇದಕ್ಕೆ ಅವರ ಚಿಕಾಗೊ ಭಾಷಣವೇ ಒಂದು ಉದಾಹರಣೆ. ಸ್ವಾಮಿ ವಿವೇಕಾನಂದರ ಜೀವನ ಸಾಧನೆ ಕುರಿತು ಈ ಕೃತಿಯನ್ನು ಚಿತ್ರಗಳೊಂದಿಗೆ ಆಕರ್ಷಕವಾಗಿ ಪ್ರಕಟಿಸಿದ್ದಾರೆ. 

About the Author

ಬೆ.ಗೋ. ರಮೇಶ್
(22 August 1945)

ಬೆ.ಗೋ. ರಮೇಶ್ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸಗೆಯಲ್ಲಿ ಆಗಸ್ಟ್ 22 , 1945ರಲ್ಲಿ ಜನಿಸಿದರು. ತಂದೆ ಗೊವಿಂದರಾಜು, ತಾಯಿ ರಾಧಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ನಡೆದದ್ದು ಬೆಂಗಳೂರಿನ ಮಲ್ಲೇಶ್ವರಂ ಶಾಲೆಯಲ್ಲಿ. ಇಂಟರ್‌ಮೀಡಿಯೆಟ್ ಓದಿದ್ದು ಸರಕಾರಿ ಕಾಲೇಜಿನಲ್ಲಿ. ಮುಂದೆ ರಮೇಶರು ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಪಡೆದರು. ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉದ್ಯೋಗ ನಿರ್ವಹಿಸಿದ ಬೆ. ಗೋ ರಮೇಶರು ಕರ್ನಾಟಕ ಪವರ್ ಕಾರ್ಪೋರೇಷನ್ನಿನಲ್ಲಿ ಸಹಾಯಕ ಎಂಜನಿಯರಾಗಿ, ಸಹಾಯಕ ಎಕ್ಸುಕ್ಯುಟಿವ್ ಎಂಜನಿಯರಾಗಿ, ಎಕ್ಸಿಕ್ಯುಟಿವ್ ಎಂಜನಿಯರಾಗಿ, ರಾಯಚೂರಿನ ಶಾಕೋತ್ಪನ್ನ ವಿದ್ಯುದಾಗಾರದಲ್ಲಿ ಸೇವೆ ಸಲ್ಲಿಸಿ ...

READ MORE

Related Books