ಇಲ್ಲಿ ಪ್ರಾಣಿಗಳು ಪರಸ್ಪರ ಗೆಳೆಯರಾಗಿ, ನೆರೆಹೊರೆಯವರಾಗಿ ಬಾಳುತ್ತವೆ. ಮನುಷ್ಯರಂತೆ ಆಲೋಚಿಸುತ್ತವೆ. ಇವುಗಳಿಗೂ ಕಷ್ಟ , ಸುಖ, ದುಃಖ ಉಂಟು. ಕಷ್ಟದ ಸಂದರ್ಭ ಒದಗಿದಾಗ ತಂತ್ರಗಾರಿಕೆಯಿಂದ ನಿಭಾಯಿಸಿಕೊಳ್ಳಬಲ್ಲವು. ವಂಚನೆ, ಕುತಂತ್ರವನ್ನು ಸಹ ಇವು ತಮ್ಮ ಕಾರ್ಯಸಾಧನೆಗೆ ಬಳಸಿಕೊಳ್ಳುವುದುಂಟು. ತಮ್ಮ ನಡವಳಿಕೆಯ ಮೂಲಕ ಮನುಷ್ಯರಿಗೂ ನೀತಿಪಾಠ ಹೇಳಬಲ್ಲವು. ಇದು ಪ್ರಾಣಿ-ಪಕ್ಷಿಗಳ ಕಥಾ ಪ್ರಪಂಚ. ಚಿತ್ರಗಾರರಾದ ಶ್ರೀ ಹರಿಣಿ ಸೂಕ್ತ ಸಂದರ್ಭೋಚಿತ ಚಿತ್ರಗಳನ್ನು ಬಿಡಿಸಿ ಪುಸ್ತಕದ ಅಂದವನ್ನು ಹೆಚ್ಚಿಸಿದ್ದಾರೆ.
©2024 Book Brahma Private Limited.