ಲೇಖಕ ಬೆ.ಗೋ. ರಮೇಶ್ ಅವರು ನಸೀರುದ್ದೀನ್ ಮುಲ್ಲಾ ಅವರು ರಚಿಸಿದ ಕಥೆಗಳನ್ನು ಸಂಗ್ರಹಿಸಿ ಮಕ್ಕಳಿಗಾಗಿ ನೀಡಿರುವ ಕೃತಿ ಇದು-ಮುಲ್ಲಾನ ಕಥೆಗಳು. ಈ ಕಥೆಗಳು ಮಕ್ಕಳ ಮನಸ್ಸನ್ನು ಮುದುಗೊಳಿಸುತ್ತವೆ ಮಾತ್ರವಲ್ಲ; ಅವರ ಮನೋವಿಕಾಸಕ್ಕೆ ನೆರವಾಗುತ್ತವೆ. ಕಥೆಗಳಲ್ಲಿರುವ ತರ್ಕ, ಜಾಣ್ಮೆ, ಕುತೂಹಲ, ಚಾಣಾಕ್ಷತನ ಎಲ್ಲವೂ ಮಕ್ಕಳಿಗೆ ಪಾಠವಾಗುತ್ತವೆ. ಬಹುತೇಕ ವೇಳೆ, ಬದುಕಿನ ಸಮಸ್ಯೆಗಳ ಕುರಿತು ಅರಿವು ಮೂಡಿಸಿ, ಪರಿಹಾರವನ್ನೂ ಸೂಚಿಸುವಂತಿವೆ. ಸಮಸ್ಯೆ ಬಂದಾಗ ಎದೆಗುಂದದೇ ಅವುಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತೂ ಧೈರ್ಯ ನೀಡುವಂತಿವೆ.
©2024 Book Brahma Private Limited.