ಮಗಳಿಗೆ ಹೇಳಿದ ಕಥೆಗಳು ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕಥಾ ಸಂಕಲನವಾಗಿದೆ. ಇಲ್ಲಿನ ಎಲ್ಲಾ ಕಥೆಗಳು ಹೆಚ್ಚು ಪರಿಸರದ ಸಂಗತಿಗಳನ್ನು ನಮಗೆ ಹೇಳುತ್ತವೆ. ಆಗಲೇ ಹೇಳಿದ ಹಾಗೆ ನಮ್ಮ ಪ್ರೀತಿ, ನಮ್ಮ ಧ್ಯಾನಗಳು ನಮ್ಮನ್ನು ಯಾವುದಕ್ಕೂ ಹೆಚ್ಚು ಆಪ್ತವಾಗಿಸಿ ಅದರ ಅನುಭವಗಳೆಲ್ಲ ನಮ್ಮದಾಗಿಸಿ ಬಿಡುತ್ತದೆ. ಇಲ್ಲಿ ಕೂಡ ಫೈಜ್ ನಟರಾಜ್ ಅವರನ್ನು ಮಕ್ಕಳು ಹಾಗೂ ಪರಿಸರ ಹೆಚ್ಚು ಆವರಿಸಿಕೊಂಡಂತೆ ಕಾಣುತ್ತದೆ. ಇಲ್ಲಿರುವ ಕಥೆಗಳನ್ನು ಅವರು ಅವರ ಮಗಳಿಗೆ ಹೇಳಿದಂತೆ ನಿರೂಪಿಸಿದ್ದಾರೆ . ಇಲ್ಲಿನವು ಪುಟ್ಟ ಪುಟ್ಟ ಕಥೆಗಳಾದರೂ ಅವುಗಳ ಒಳ ಅರಿವು ಬಹಳ ವಿಸ್ತಾರವಾಗಿದೆ ಎಂದು ಹೇಳಬಹುದು. ಇಲ್ಲಿನವು ಕಥೆಗಳು ಎನ್ನುವುದಕ್ಕಿಂತ ನಮ್ಮ ಸುತ್ತಲೂ ನಡೆಯುವ ಸಂಗತಿಗಳನ್ನೇ ಒಂದು ಅರಿವಿನ ತಿಳಿವಾಗಿ ಮಕ್ಕಳ ಮುಂದೆ ಇಡಲು ಪ್ರಯತ್ನಿಸಿದ್ದಂತೆ ನನಗೆ ಕಾಣುತ್ತದೆ.
©2024 Book Brahma Private Limited.