`ಕಣ್ಣಾ ಮುಚ್ಚೆ ಕಾಡೇ ಗೂಡೇ’ ಮಕ್ಕಳ ಕಥಾಸಂಕಲನವಾಗಿದ್ದು, ಕೃತಿಯ ಮೂಲ ಲೇಖಕ ಸಾ.ಕೆಂ. ನಾಗರಾಜ. ಲಕ್ಕೂರು ಆನಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯು ಹಲವಾರು ವಿಚಾರಗಳ ಕುರಿತು ಕತೆಯನ್ನು ಕಟ್ಟಿಕೊಡುತ್ತದೆ. ಕೃತಿಯಲ್ಲಿನ ಕತೆಯೊಂದು ಹೀಗಿದೆ; ಮೇಡಂ ಕ್ಯೂರಿ ಮಹಾವಿಜ್ಞಾನಿ, ಆದರೆ ಮೈ ತುಂಬಾ ಬಟ್ಟೆ, ಹೊಟ್ಟೆ ತುಂಬಾ ಊಟವೂ ಒಮ್ಮೊಮ್ಮೆ ಇರುತ್ತಿರಲಿಲ್ಲ. ಅಂತಹ ಬಡತನದಲ್ಲಿಯೇ ಅವಳು ಅದೆಷ್ಟು ನಿಷ್ಠೆಯಿಂದ ಸತ್ಯದ ಸಂಭೋದನೆಗೆ ತೊಡಗಿದಳು! ಅದರಿಂದ ಅವರ ಮನೆತನಕ್ಕೆ ಐದು ನೊಬೆಲ್ ಪಾರಿತೋಷಕ, ಪುರಸ್ಕಾರಗಳು ದೊರೆತವು. ಅವಳಿಗೆ ಎರಡು, ಗಂಡನಿಗೆ ಒಂದು, ಮಗಳಿಗೆ ಒಂದು ಅಳಿಯನಿಗೂ ಒಂದು, ಬಹುಶಃ ಪ್ರಪಂಚದಲ್ಲಿಯೇ ಇದೊಂದು ಅಪರೂಪದ ಘಟನೆ. ಒಂದು ದಿನ ಹಿರಿಯ ಪತ್ರಕರ್ತರು ಅವಳನ್ನು ಕಾಣಲು ಬಂದರು. ಮೇರಿ ತನ್ನ ಮನೆಯ ಮುಂದಿನ ಕೈತೋಟದಲ್ಲಿ ಕಳೆ ತೆಗೆಯುತ್ತ ಕುಳಿತಿದ್ದಳು. 'ಮೇಡಂ ಕ್ಯೂರಿ ಎಲ್ಲಿ? ಎಂದು ಆ ಪತ್ರಕರ್ತರು ಕ್ಯೂರಿಗೆ ಕೇಳಿದರು. 'ಕ್ಯೂರಿ ಮನೆಯ ಒಳಗಿಲ್ಲ. ನೀವು ಬಂದರೆ ನಿಮಗೆ ಸಂದೇಶ ಕೊಡಲು ಹೇಳಿದ್ದಾಳೆ ಎಂದು ಒಂದು ಸಂದೇಶ ಬರೆದುಕೊಟ್ಟಳು. 'ವ್ಯಕ್ತಿಗಿಂತ ವಿಶ್ವದಲ್ಲಿ ಆಸಕ್ತಿ ತಾಳಿರಿ' ಎಂಬುದೇ ಅವಳ ಸಂದೇಶವಾಗಿತ್ತು.
©2024 Book Brahma Private Limited.