ಶೆಕ್ಸ್ ಪಿಯರ್ ನ ಪ್ರಸಿದ್ಧ ನಾಟಕಗಳ ಪೈಕಿ ಹ್ಯಾಮ್ ಲೆಟ್ : ಡೆನ್ಮಾರ್ಕ್ ನ ರಾಜಕುಮಾರ (Hamlet: Prince of Denmark) ಸಹ ಒಂದು. ಈತ ಡೆನ್ಮಾರ್ಕ್ ನ ರಾಜಕುಮಾರ. ಶೆಕ್ಸ್ ಪಿಯರ್ ಮಕ್ಕಳ ಕಥಾಲೋಕ ಸರಣಿಯಡಿ ಈ ಕೃತಿ ಪ್ರಕಟಿಸಲಾಗಿದೆ. ಹಿರಿಯ ಲೇಖಕ ಜಿ.ಎಂ. ಕೃಷ್ಣಮೂರ್ತಿ ಅವರು ಈ ನಾಟಕವನ್ನು ಸಣ್ಣ ವೃತ್ತಾಂತವಾಗಿ ಪರಿವರ್ತಿಸಿ, ಮಕ್ಕಳಿಗೆ ತಿಳಿಯುವ ಹಾಗೆ, ಮೂಲ ನಾಟಕದ ವಸ್ತುವಿಗೆ ಧಕ್ಕೆ ಬಾರದ ಹಾಗೆ ನಾಟಕವನ್ನು ರಚಿಸಿದ್ದಾರೆ. ಈ ನಾಟಕವು ದುರಂತದಲ್ಲಿ ಕೊನೆಗೊಳ್ಳುತ್ತದೆ. ಡೆನ್ಮಾರ್ಕ್ ರಾಜಕುಮಾರನ ಶೋಚನೀಯ ಕಥೆ ಇದು. ಹ್ಯಾಮ್ ಲೆಟ್ ನ ತಂದೆಯ ಮರಣಾನಂತರ ಆತನ ತಾಯಿ ಹಾಗೂ ಚಿಕ್ಕಪ್ಪನ ಸಂಚನ್ನು ತಿಳಿಯಲು ರಾಜಕುಮಾರ ಯತ್ನಿಸುತ್ತಾನೆ. ಅಂತಿಮವಾಗಿ, ತನ್ನ ತಂದೆಯ ಸಾವಿಗೆ ಈ ಇಬ್ಬರು ಹೇಗೆ ಕಾರಣರು ಎಂಬುದನ್ನು ತಿಳಿದು, ಅವರಿಬ್ಬರ ವಿರುದ್ಧ ಸೇಡು ತೀರಿಸಿಕೊಳ್ಳಲು ಯೋಜಿಸುತ್ತಾನೆ. ಇದು ಈ ನಾಟಕದ ವಸ್ತು. ಮಕ್ಕಳಿಗೋಸ್ಕರ ನಾಟಕ ಬರೆದಿದ್ದು, ಭಾಷೆಯೂ ತುಂಬಾ ಸರಳಖವಾಗಿದ್ದು, ರಸವತ್ತಾಗಿದೆ.
©2024 Book Brahma Private Limited.