ಭಾಗೀರಥಿಯವರ “ಗಿಳಿ ಪದ್ಮ” ತಾಯಿ ಮಗಳ ಸಂಬಂಧದ ಗಾಡತೆಯನ್ನು ಕುರಿತ ಮಕ್ಕಳ ಕಥಾ ಸಂಕಲನವಾಗಿದ್ದು, ಪದ್ಯವು ಮಿಳಿತವಾಗಿ ಭಾವಸಂಗಮಗಳ ನೆಲೆಯಲ್ಲಿ ಪಸರಿಸಿದೆ. ತಾಯಿ ಮಗಳ ನಡುವಿನ ಕೇವಲ ಸಂಭಾಷಣೆಯಾಗಿರದೆ ಎರಡು ಜೀವಗಳ ಒಳದನಿ, ಕನಸಿನ ಗೂಡು ಇದಾಗಿದೆ. ಕಥೆಯ ಕೇಂದ್ರ ಪಾತ್ರವಾದ ಕಲ್ಯಾಣಿಯ ಒಳ ಮನಸ್ಸಿನ ತುಡಿತವಾಗಿ ಅನುಭಾವದ ಪರಿಧಿಯನ್ನು ದಾಟಿ ನಮ್ಮೊಳಗೆ ಚಿಂತನಾ ತರಂಗಗಳನ್ನು ಪಸರಿಸುತ್ತದೆ. ಅವಳ ಸ್ವಗತಕ್ಕೆ ಮರುದನಿಯಾಗಿ ನುಡಿಯುತ್ತದೆ ಗಿಳಿಪದ್ಯಗಳು.
ಇಲ್ಲಿನ ಪದ್ಯಗಳು ಹೆಣ್ಣಿನ ಕನಸಿನನ ಪ್ರತೀಕಗಳು. ಪ್ರತಿ ಹೆಣ್ಣುಗಳು ಬಿಡುಗಡೆಗಾಗಿ ಬಯಸುವ, ಅಜ್ಜಿ ಕತೆಯಲ್ಲಿ ಬರುವ ಏಳು ಸಮುದ್ರದಾಚೆ ಕೀಳು ಸಮುದ್ರ, ಅಲ್ಲೊಬ್ಬ ರಾಕ್ಷಸ, ಆ ರಾಕ್ಷಸ ರಾಜಕುಮಾರಿಯನ್ನು ಕದ್ದೊಯುತ್ತಾನೆ, ಅಲ್ಲಿಗೆ ಬರುವ ರಾಜಕುಮಾರ ಅವಳನ್ನು ಬಿಡುಗಡೆಗೊಳಿಸಿ ತನ್ನೊಂದಿಗೆ ಕರೆದೊಯ್ಯುತ್ತಾನೆ". ಇಂತಹ ಕಥೆಗಳನ್ನು ನಾವು ಕೇಳಿರುತ್ತೇವೆ. ಇಂತಹ ಸ್ತ್ರೀ ಸ್ವಾತಂತ್ಯ್ರ ಬಯಕೆ, ಸಂಬಂಧಗಳ ಹಂಬಲಿಕೆ ಇಲ್ಲಿಯ ಪ್ರಧಾನ ಚಿತ್ರಣಗಳಾಗಿವೆ.
©2025 Book Brahma Private Limited.