ಲೇಖಕ ವೀರೇಂದ್ರ ರಾವಿಹಾಳ್ ಅವರ ಮಕ್ಕಳ ಸಾಹಿತ್ಯ ಕೃತಿ `ಈ ಕಾಲದ ಹುಡುಗʼ. ನಾರಂಶೆಟ್ಟಿ ಉಮಾಮಹೇಶ್ವರರಾವ್ ಅವರು ಮೂಲ ಕೃತಿಯ ಕತೃ. ರವಿ ಎನ್ನುವ ತೀಕ್ಷ್ಣಮತಿಯುಳ್ಳ ಚತುರ ಹುಡುಗನ ಸಾಹಸಗಳನ್ನು ಅರ್ಥವತ್ತಾಗಿ ನಿರೂಪಿಸುವ ಕಾದಂಬರಿ. ಸಾದಾ ಹುಡುಗನಂತೆ ತೋರಿದರೂ ಸ್ನೇಹಮಯ ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ಈಜು ಬಾರದ ಹುಡುಗನೊಬ್ಬನನ್ನು ಬದುಕುಸುವುದು, ಅಜ್ಜಿಯ ಕೊರಳ ಸರ ಕದಿಯುವುದು, ಮಕ್ಕಳನ್ನು ಅಪಹರಿಸಿದಾಗ ಆತ ಪರಾರಿಯಾಗಿ ಬರುವುದು, ಮುಂತಾದ ಸಾಹಸ ಕತೆಗಳನ್ನು ಲೇಖಕರು ಕಾದಂಬರಿಯಲ್ಲಿ ಸ್ವಾರಸ್ಯವಾಗಿ ಹೇಳುತ್ತಾರೆ. ಜೊತೆಗೆ ರವಿಗೆ ಅಪ್ಪ, ಅಮ್ಮ, ಅಜ್ಜ-ಅಜ್ಜಿಯೊಂದಿಗಿನ ಸಾಮಿಪ್ಯವನ್ನೂ ಚಿತ್ರಿಸುತ್ತಾರೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನವರಾದ ವೀರೇಂದ್ರ ರಾವಿಹಾಳ್ ಇವರು ಮೂಲತಃ ವ್ಯಾಪಾರಿಗಳಾಗಿದ್ದು ವ್ಯಾಸಾಂಗದ ದಿನಗಳಿಂದಲೂ ತೀವ್ರವಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 'ಕಲ್ಲುಗಳು ಬೇಕು ಗೆಳೆಯ' ಇವರ ಮೊದಲ ಕವನಸಂಕಲನವಾಗಿದೆ. 1996 ರಲ್ಲಿ ಚಿತ್ರ ಸಾಹಿತಿ ಚಿ.ಉದಯಶಂಕರ್ ಸ್ಮರಣಾರ್ಥ ಪ್ರೇಮಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2012 ರ ಸಕ್ರಮಣ ಸಣ್ಣ ಕಥಾ ಪುರಸ್ಕಾರ, ಸಾಹಿತ್ಯ ಪರಿಷತ್ತಿನ ಕೆ. ವಿ. ರತ್ನಮ್ಮ ದತ್ತಿ ಪ್ರಶಸ್ತಿ, 2021ರ ಸಾಲಿನ ಉತ್ಥಾನ ಕಥಾ ಪ್ರಶಸ್ತಿ ಆರೂಢಜ್ಯೋತಿ ಪ್ರಶಸ್ತಿಗಳನ್ನು ಪಡೆದುಕೊಂಡು ತಮ್ಮ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮುಂದುವರೆಸಿದ್ದಾರೆ. ಪ್ರಸ್ತುತ ಬಳ್ಳಾರಿಯಲ್ಲಿ ವಾಸವಿದ್ದಾರೆ. ...
READ MORE