ಭರತ ಬಿ. ರಾವ್ ಅವರು ಮೂಲತಃ ಬೆಂಗಳೂರು ನಿವಾಸಿ. ವೃತ್ತಿಯಿಂದ ಸಾಫ್ಟ್ ವೇರ್ ಎಂಜಿನಿಯರರು. ಹವ್ಯಾಸಿ ಬರಹಗಾರರು. ಚಾರಣ. ಪರ್ವತಾರೋಹಣ ಕುರಿತು ತಮ್ಮದೇ ಬ್ಲಾಗ್ ಗಳಲ್ಲಿ ಬರೆಯುವ ಮೂಲಕ ಬರಹ ಅಭಿಮಾನಿಗಳನ್ನು ಹೊಂದಿದ್ದು, ಪಶ್ಚಿಮ ಘಟ್ಟಗಳ ವಿವಿಧ ತಾಣಗಳನ್ನು ಪರಿಚಯಿಸಿದ್ದಾರೆ. ಸಂಸ್ಕೃತಾಭ್ಯಾಸಿಗಳು. ಪಂಚತಂತ್ರದ ಕಥೆಗಳನ್ನು ಮೂಲ ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.