ಲೇಖಕ ತಮ್ಮಣ್ಣ ಬೀಗಾರ ಅವರ ಹೊಸ ಕತಾ ಸಂಕಲನ ‘ನಕ್ಷತ್ರ ನೋಡುತ್ತ’ 17 ಕತೆಗಳನ್ನು ಒಳಗೊಂಡಿದೆ. ‘ಮಕ್ಕಳಿಗಾಗಿ ಬರೆಯಬೇಕು ಎನ್ನುವ ಹಂಬಲ ಕಾಡುವುದು, ಅದಕ್ಕಾಗಿ ಬಗೆಬಗೆಯಲ್ಲಿ ಬರಹವನ್ನು ಹರವಿಕೊಳ್ಳುವುದು ನಮ್ಮ ನಡುವಿನ ಕೆಲ ವಿಶಿಷ್ಟ, ಸಂವೇದನಾಶೀಲ ಮನಸ್ಸುಗಳಿಗೆ ಸಾಧ್ಯವಾಗುವಂಥದು. ತಮ್ಮಣ್ಣ ಬೀಗಾರ ಈ ಬಗೆಯ ಒಬ್ಬ ವಿಶೇಷದ ಬರಹಗಾರರು’ ಎಂದು ಸಾಹಿತಿ ಡಾ. ಆನಂದ ಪಾಟೀಲರು ಗುರುತಿಸಿದ್ದಾರೆ.
ಮಕ್ಕಳ ಲೋಕದ ವಿವಿಧ ಸಂಗತಿಗಳು ಕಥೆಗಳಾಗಿ ರೂಪುಗೊಂಡಿವೆ. ಪ್ರಾಣಿ ಪಕ್ಷಿಗಳ ಕಥೆಗಳೂ ಕೆಲವಿವೆ. ಅವನ್ನೂ ಬೀಗಾರರು ಹೊಸ ರೀತಿಯಲ್ಲಿ ಇಟ್ಟಿರುವ ಪರಿ ಮಕ್ಕಳಿಗೆ ಖುಷಿ ಕೊಡುವಂತಿದೆ. ಉಳಿದಂತೆ ಓದಿಗೆ ಹಂಬಲಿಸುವ ಮಕ್ಕಳು, ಶಾಲೆಯ ಸುತ್ತಲಿನ ಸಂಗತಿಗಳು, ಆಟ ನೋವುಗಳೆಲ್ಲ ಕಲಾತ್ಮಕ ಕಥೆಗಳಾಗಿ ಹರಡಿಕೊಂಡಿವೆ.
©2024 Book Brahma Private Limited.