ಹೆಸರಾಂತ ಲೇಖಕ ಕೆದಂಬಾಡಿ ಜತ್ತಪ್ಪ ರೈ ಅವರು ಭಾವೀ ಜನಾಂಗಕ್ಕಾಗಿ ಎಂಬ ಉಪಶೀರ್ಷಿಕೆಯಡಿ ಮಕ್ಕಳಿಗಾಗಿ ಬರೆದ ಕೃತಿ-ಬೇಟೆಯ ಉರುಳು. ಈ ಕೃತಿಯು ಬೇಟೆ ಕುರಿತ ಉಪಯುಕ್ತ ಮಾಹಿತಿ ಒಳಗೊಂಡಿದೆ. ಚಿಕ್ಕ ಪುಟ್ಟ ಬೇಟೆಗಳ ಜಾಣ್ಮೆಯನ್ನು ಕಾಣಬಹುದು. ಬೇಟೆಯಾಡುವುದು ಇಂದು ಅಪರಾಧ. ಆದರೆ, ಅದು ಒಂದು ಕೌಶಲವೂ ಹೌದು. ಅದಕ್ಕೆ ಸಾಕಷ್ಟು ಸಿದ್ಧತೆ ಅಗತ್ಯವಿದೆ. ಈ ಸಂಬಂಧ, ಸಾಕ್ಷ್ಯಚಿತ್ರದ ದಾಖಲೆ ಇದು. ಬೇಟೆಯ ನೆನಪುಗಳು ಕೃತಿಯನ್ನು ಬರೆದು ಕರ್ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿರುವ ಲೇಖಕರು. ಬೇಟೆಯ ಕುರಿತ ತಮ್ಮ ಅನುಭವವನ್ನು ಇಲ್ಲಿ ರಸವತ್ತಾಗಿ ದಾಖಲಿಸಿ, ಸಂಶೋಧನೆ ಅಧ್ಯಯನಕ್ಕೆ ವಿಫುಲ ಸಾಧ್ಯತೆಗಳನ್ನು ಈ ಕೃತಿ ನೀಡುತ್ತದೆ. ಭಾವೀ ಜನಾಂಗವು ಈ ಕಲೆಯ ಕೌಶಲ ತಿಳಿದಿರಬೇಕು ಎಂಬ ಆಶಯದೊಂದಿಗೆ ಲೇಖಕರು ಇಲ್ಲಿ ಮಕ್ಕಳೀಗಾಗಿ ಕಥೆ ಹೇಳುವಂತೆ ವಿವರಿಸಿದ್ದಾರೆ.
©2024 Book Brahma Private Limited.