‘ಬೇಡರ ಹುಡುಗ ಮತ್ತು ಗಿಳಿ’ ಕೃತಿಯು ಚಂದ್ರಶೇಖರ ಕಂಬಾರ ಅವರ ಮಕ್ಕಳ ಕತಾಸಂಕಲನವಾಗಿದೆ. ಇಲ್ಲಿಯ ಕತೆಗಳು ಆಕರ್ಷಕ ಚಿತ್ರಗಳೊಂದಿಗೆ ಕೂಡಿವೆ. ಆರು ಕತೆಗಳಿರುವ ಈ ಕೃತಿಯು ಹಲವಾರು ವಸ್ತು ವಿಚಾರಗಳನ್ನು ಒಳಗೊಂಡಿದೆ. ಕಾಡನ್ನು ಕೇಂದ್ರೀಕರಿಸಿಕೊಂಡು ರಚಿತವಾದ ಇಲ್ಲಿಯ ಕತೆಗಳು ‘ಬೇಡ ಮತ್ತು ಗಿಳಿ’ಯ ನಡುವಿನ ಸಂಭಾಷಣೆಯನ್ನು ಮುಖ್ಯವಾಗಿಸುತ್ತದೆ. ಲೇಖಕ-ಸಾಹಿತಿ ಚಂದ್ರಶೇಖರ ಕಂಬಾರ ಅವರ ಆಕರ್ಷಕ ನಿರೂಪಣಾ ಶೈಲಿಯನ್ನು ಇಲ್ಲಿ ಕಾಣಬಹುದು.
©2024 Book Brahma Private Limited.