ಲೇಖಕಿ ಶಾರದಾ ಮೂರ್ತಿ ಅವರ ‘ಮಕರಂದ’ ಕೃತಿಯು ಸುಭಾಷಿತ ಅರ್ಥ ಕತೆಯಾಗಿದೆ. ಇಲ್ಲಿ ಸುಭಾಷಿತ ಸಂದೇಶಗಳನ್ನು ಮಕ್ಕಳಿಗೆ ಹಿತ-ಗುಣವಾಗುವಂತಹ ಕತೆಗಳಾಗಿ ಹೆಣೆಯಲ್ಪಟ್ಟಿವೆ. ಮಕ್ಕಳಲ್ಲಿ ಸದ್ಗುಣಗಳನ್ನು ಬಿತ್ತಿ ಬೆಳೆಸುವ ಈ ಪುಸ್ತಕವು ಸರಳ ಭಾಷೆ, ಸುಲಲಿತ ನಿರೂಪಣೆಯನ್ನು ಹೊಂದಿದೆ.
ಶಾರದಾ ಅವರು ಮೂಲತಃ ಶಿವಮೊಗ್ಗದವರು. ತಂದೆ- ಜೆ.ಎಲ್. ರಂಗಾಭಟ್ಟರು, ತಾಯಿ- ಮಹಾಲಕ್ಷ್ಮಮ್ಮ. ಶಿಶು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿಗೈದಿರುವ ಲೇಖಕಿ ಶಾರದಾ ವಿ. ಮೂರ್ತಿ. ಕಥೆ, ಕವನ, ಕಾದಂಬರಿ, ನಾಟಕ, ಪ್ರಬಂಧಗಳ ರಚನೆಯಿಂದ ಮಕ್ಕಳ ಮನೋವಿಕಾಸಕ್ಕೆ ಕಾಣ್ಕೆ ನೀಡಿದ್ದಾರೆ. ಓದಿನ ಹಂತದಲ್ಲೇ ಶಿಶುಸಾಹಿತ್ಯದೆಡೆಗೆ ಆಕರ್ಷಿತರಾದವರು. ಬರವಣಿಗೆ ಫಲಿಸುತ್ತಲೇ ಅದನ್ನೇ ಉಸಿರಾಗಿಸಿ ಕೊಂಡವರು. ಬೆಳ್ಳಿಚುಕ್ಕಿ, ಸ್ನೇಹಸೌರಭ, ಅನನ್ಯ, ಅರ್ಥ, ಮಿಡಿದ ಹೃದಯ, ಗೆಲುವು, ಆಂತರ್ಯ, ನಿರ್ಧಾರ ಮತ್ತಿತರ ಕಾದಂಬರಿಗಳನ್ನು ರಚಿಸಿದ್ದಾರೆ. ದಿಶ, ಮೌಲ್ಯ, ಹೊಂಬೆಳಗು, ಬಾಂಧವ್ಯ, ಶೋಧ, ಬೇರು, ಹಾಗೂ ಅನುಬಂಧ ಕಥಾ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಮಾತಾಡಿ ಗೊಂಬೆಗಳೆ, ...
READ MORE