ಮೈಸೂ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ದೇವುಡು ನರಸಿಂಹಶಾಸ್ತ್ರಿ ಅವರ ‘ಬುದ್ದಿಯ ಕಥೆಗಳು’ ಕೃತಿಯನ್ನು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಪಠ್ಯವಾಗಿ ರೂಪಿಸಿತ್ತು ಹಾಗೂ ಉಪಾಧ್ಯಾಯರ ಉಪಯೋಗಕ್ರಿಕೆಂದೂ ಶಿಫಾರಸು ಮಾಡಿತ್ತು. ಪ್ರಸ್ತುತ ಕೃತಿಯು ದ್ವಿತೀಯ ಮುದ್ರಣವಾಗಿದೆ. ಕಥೆಯಲ್ಲಿಯ ನೀತಿಯ ಸ್ವರೂಪವು ಮಕ್ಕಳ ಮನಸ್ಸಿನಲ್ಲಿ ಸುಲಭವಾಗಿ ಮೂಡುವಂತೆ ಪ್ರಯತ್ನಿಸಲಾಗಿದೆ. ಇಲ್ಲಿಯ ಒಟ್ಟು 14 ಕಥೆಗಳ ವಸ್ತು-ತಂದೆ-ತಾಯಿ, ಶಿಕ್ಷಕರಿಗೆ, ರಾಜರಿಗೆ ವಿಧೆಯರಾಗಿರುವುದು, ನಿಜವನ್ನೇ ನುಡಿಯುವುದು, ಶುಚಿತ್ರ ಕಾಯ್ದುಕೊಳ್ಳುವುದು, ಪ್ರಾಣಿಗಳಲ್ಲಿ ದಯೆ ತೋರುವುದು ಆಗಿದೆ. ತಿಮ್ಮ, ಬಾಳೆಯೂ ಸುಗಂಧ ರಾಜನೂ, ಗರುಡನೂ ಗೂಬೆಯೂ ಇತ್ಯಾದಿ ಕಥೆಗಳಿವೆ.
©2024 Book Brahma Private Limited.